ವರುಣಾರ್ಭಟ:ಶಾಲೆಗಳ ಪುನರಾರಂಭ ದಿನ ಮುಂದೂಡಿಕೆ! ಎರಡು ದಿನಗಳ ಕಾಲ ರಜೆ ಘೋಷಣೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿಯಲಿರುವ ಸೂಚನೆಗಳ ಆಧಾರದಲ್ಲಿ ಶಾಲೆಗಳು ಪುನರರಾಂಭವಾಗಬೇಕಾಗಿದ್ದ ದಿನಾಂಕ 29.5.2025 ರಂದು ಮತ್ತು 30.05.2025 ರಂದು ಮುಂಜಾಗ್ರತೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಎರಡು ದಿನಗಳನ್ನು ಮುಂದಿನ ದಿನಗಳಲ್ಲಿ ಸರಿದೂಗಿಸುವ ನಿಬಂದನೆಗೆ ಒಳಪಟ್ಟು ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ . ಆದರೆ sslc ಪರೀಕ್ಷೆ ಎರಡು ಈಗಾಗಲೇ ನಿಗಧಿಯಾಗಿರುವಂತೆ ನಡೆಯುತ್ತವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
