ವಿ.ಬಾಡಗ :ಕಾಡುಕೋಣಗಳ ಹಾವಳಿ:ಕಾಫಿ ಗಿಡಗಳು ನಾಶ
ವಿರಾಜಪೇಟೆ:ದಶಕಗಳಿಂದ ಕಾಡಾನೆಗಳ ಉಪಟಳ ಕಾಫಿ ತೋಟದಲ್ಲಿ ಸಾಮಾನ್ಯವಾಗಿದೆ. ಆದರೇ ಇದೀಗ ಕಾಡು ಕೋಣಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕಾಫಿ ತೋಟಗಳಲ್ಲಿ ಅಪಾರ ನಷ್ಟ ಸಂಭವಿಸಿರುವ ಘಟನೆ ವಿರಾಜಪೇಟೆ ಸಮೀಪದ ವಿ. ಬಾಡಗ ಗ್ರಾಮದಲ್ಲಿ ನಡೆದಿದೆ.ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿ.ಬಾಡಗ ಗ್ರಾಮದ ಪ್ರದೇಶದಲ್ಲಿ ಕಾಡು ಕೋಣಗಳ ಧಾಳಿಯಿಂದಾಗಿ ಕಾಫಿತೋಟಗಳು ಹಾನಿಗೆ ಒಳಗಾಗಿದೆ. ಅರಣ್ಯದಲ್ಲಿ ಕಂಡು ಬರುವ ವನ್ಯಜೀವಿ ಗಳು ವಸತಿ ಪ್ರದೇಶಗಳಲ್ಲಿ ಕಂಡು ಬರುವುದು ಸಹಜವಾಗಿದೆ. ಇದರಿಂದ ಕಾರ್ಮಿಕರು ಮತ್ತು ತೋಟದ ಮಾಲೀಕರು ಕೃಷಿಯೇತರ ಚಟುವಟಿಕೆಗಳನ್ನು ನಿರ್ವಹಿಸಲು ಸಂಕಷ್ಟ ಎದುರಿಸುತಿದ್ದಾರೆ. ವಿ.ಬಾಡಗ ಗ್ರಾಮ ವ್ಯಾಪ್ತಿಯಾದ ಕೊಕ್ಕ ಮತ್ತು ಪುದುಕೇರಿ ಗ್ರಾಮದ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡು ಕೋಣಗಳು ತೋಟಗಳಲ್ಲಿ ಬೆಳೆದಿರುವ ಕಾಫಿ ಗಿಡ,ತೆಂಗು, ಮತ್ತು ಬಾಳೆ ಗಿಡಗಳನ್ನು ದ್ವಂಸ ಮಾಡಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಮಳವಂಡ ಸವೀನ್ ದೇವಯ್ಯ ಮಾತನಾಡಿ, ಗ್ರಾಮಸ್ಥರು ಕೊಕ್ಕ ಗ್ರಾಮ ಈ ಪ್ರದೇಶದಲ್ಲಿ ಈ ಮೊದಲು ಕಾಡಾನೆಗಳ ದಾಂಧಲೆ ನಡೆಯುತಿದ್ದು, ಇದೀಗಾ ಕಾಡು ಕೋಣ, ನವಿಲುಗಳು, ಮಂಗಗಳು, ಮತ್ತು ಇತರ ಪ್ರಾಣಿಗಳಿಂದ ಸಂಕಷ್ಟ ಎದುರಾಗಿದೆ. ಇದರಿಂದ ತೋಟಗಳು ಹಾನಿಗೆ ಒಳಗಾಗಿದೆ. ಸನಿಹದಲ್ಲೇ ಅರಣ್ಯ ಇಲಾಖೆಯ ವಸತಿ ಗೃಹ ಇದ್ದರೂ ಸಿಬ್ಬಂದಿಗಳು ಯಾವುದೇ ಕ್ರಮಕ್ಕೆ ಮುಂದಾಗಿರುವುದಿಲ್ಲ. ಬೆಳೆಗಾರರ ಸಂಕಷ್ಟ ಕ್ಕೆ ಇಲಾಖೆ ಪ್ರತಿಕ್ರಿಯೆ ಇಲ್ಲಾದಾಗಿದೆ. ಕೃಷಿಯನ್ನು ನಂಬಿ ಬದುಕುವ ನಾವುಗಳು ವನ್ಯಜೀವಿ ಉಪಟಳ ದಿಂದ ಕಂಗಾಲಾಗಿದ್ದೇವೆ ಎಂದರು.
ಪುದುಕೇರಿಯ ಕಂಜಿತಂಡ ದಿವ್ಯ ದೇವಯ್ಯ ಮಾತನಾಡಿ, ಗ್ರಾಮಸ್ಥರು ಕೃಷಿಯನ್ನೇ ಅವಲಂಬಿಸಿಕೊಂಡಿರುವ ಜೀವನ ನಮ್ಮದ್ದು. ಕಾಡಾನೆಗಳು, ಮಂಗಗಳು, ಕಾಡು ಹಂದಿ, ಇದೀಗ ಕಾಡು ಕೋಣಗಳ ಉಪಟಳ ಹೆಚ್ಚಾಗಿದೆ. ಪೂಜೆ ಮತ್ತು ಇನ್ನಿತರ ಶುಭ ಸಮಾರಂಭಗಳಿಗೆ ಉಪಯೋಗಿಸುವ ಬಾಳೆ ಕೈಗೆಟುಕುವ ಸ್ಥಿತಿಯಲ್ಲಿ ಇಲ್ಲ. ಕಾಫಿ ಪ್ರಮುಖ ಆದಾಯವಾದರು, ವಾತಾವರಣದ ವ್ಯತಿರಿಕ್ತವಾದ ಪರಿಣಾಮ ಇಳುವರಿ ಕಡಿಮೆಗೊಳ್ಳುತಿದೆ. ಇಂತಹ ಸಂದರ್ಭದಲ್ಲಿ ವನ್ಯಜೀವಿಗಳ ಉಪಟಳದಿಂದ ತೋಟಗಳು ನಿರ್ಣಾಮವಾಗುತ್ತಿದೆ. ನಮ್ಮ ಜೀವನ ಶೋಚನೀಯ ಸ್ಥಿತಿಗೆ ತಲುಪಿದೆ ಅರಣ್ಯ ಇಲಾಖೆಯು ವನ್ಯಜೀವಿಗಳ ದಾಳಿಯನ್ನು ತಡೆಗಟ್ಟಲು ಪ್ರಯತ್ನ ನಡೆಸಬೇಕು. ಮತ್ತು ಗ್ರಾಮಸ್ಥರನ್ನು ಸಂರಕ್ಷಣೆ ಮಾಡುವಂತೆ ಆಗ್ರಹಿಸುತಿದ್ದೇವೆ. ವನ್ಯಜೀವಿ ಗಳ ಉಪಟಳವನ್ನು ತಡೆಗಟ್ಟಲು ಶಾಶ್ವತ ಪರಿಹಾರ ಕಾಣುವಂತಾಗಬೇಕು. ವನ್ಯಜೀವಿ ಧಾಳಿಯನ್ನು ತಡೆಗೆ ಕ್ರಮವಹಿಸದಿದ್ದಲ್ಲಿ ಗ್ರಾಮಸ್ಥರುರೊಂದಿಗೆ, ಬೆಳೆಗಾರರು ಸೇರಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ