ವಿರಾಜಪೇಟೆ: ಮಳೆಗೆ ದೇಗುಲದ ಬೃಹತ್ ತಡೆಗೋಡೆ ಕುಸಿತ
ವಿರಾಜಪೇಟೆ: ಪೂರ್ವ ಮುಂಗಾರು ಪರಿಣಾಮ ನಗರ ಸೇರಿಂದತೆ ಗ್ರಾಮಾಂತರ ಪ್ರದೇಶದ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದೇಗುಲದ ಬೃಹತ್ ತಡೆಗೊಡೆಯೊಂದು ಕುಸಿದಿರುವ ಘಟನೆ ವಿರಾಜಪೇಟೆ ಹೊರ ವಲಯ ಮಗ್ಗುಲ ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ನಗರಕ್ಕೆ ಹೊಂದಿಕೊಂಡಿರುವ ಮಗ್ಗುಲ ಗ್ರಾಮದ ಶ್ರೀ ಶನಿಶ್ವರ ಸ್ವಾಮಿ ದೇವಾಲಯದ ಬೃಹತ್ ತಡೆಗೊಡೆಯೊಂದು ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಕುಸಿದು ಬಿದ್ದಿದೆ. 2024 ರಲ್ಲಿ ದೇವಾಲಯದ ಆಡಳಿತ ಮಂಡಳಿಯು ಸುಮಾರು 05 ಲಕ್ಷದ ವೆಚ್ಚದಲ್ಲಿ ಬೃಹತ್ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಾಣ ಮಾಡಿತ್ತು. ಇದೀಗಾ ಸುಮಾರು ನಾಲ್ಕು ಐದು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ಮಳೆ ನೀರು ಸಂಗ್ರಹಗೊಂಡು ಇಂದು ಬೆಳಿಗ್ಗೆ 11-30 ರ ಸಮಯದಲ್ಲಿ ಬೃಹತ್ ತಡೆಗೋಡೆಯು ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳು ಗ್ರಾಮಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ದೇಗುಲದ ಆಡಳಿತ ಮಂಡಳಿಯು ರಸ್ತೆಯಲ್ಲಿದ್ದ ಅವಶೇಷಗಳನ್ನು ಜೆ.ಸಿ.ಬಿ. ಯಂತ್ರದ ಸಹಾಯದಿಂದ ತೆರವುಗೊಳಿಸಿತು.
ಈ ಸಂದರ್ಭ ಮಾತನಾಡಿದ ದೇವಾಲಯದ ಅಧ್ಯಕ್ಷರಾದ ಚೋಕಂಡ ರಮೇಶ್ ಮಂದಣ್ಣ,ಮಳೆಯಿಂದಾಗಿ ದೇವಾಲಯದ ತಡೆಗೋಡೆ ಕುಸಿದು ಬಿದ್ದಿದೆ. ಇದರಿಂದ ದೇವಾಲಯಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸರ್ಕಾರವು ಮಳೆ ಹಾನಿ ಪರಿಹಾರ ಯೋಜನೆ ಅಡಿಯಲ್ಲಿ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಈ ಸಂಧರ್ಭವಿರಾಜಪೇಟೆ ನಗರ ಪುರಸಭೆಯ ಮುಖ್ಯಾಧಿಕಾರಿಗಳಾದ ನಾಚಪ್ಪ, ಅಧ್ಯಕ್ಷರಾದ ದೇಚಮ್ಮ ಕಾಳಪ್ಪ ಮತ್ತು ಸದಸ್ಯರಾದ ಡಿ.ಪಿ. ರಾಜೇಶ್ ಪದ್ಮನಾಭ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ