ವಿರಾಜಪೇಟೆ: ರಾಮನಗರ ಸಮೀಪ ರಸ್ತೆಗೆ ಉರುಳಿದ ಮರ

ವಿರಾಜಪೇಟೆ: ರಾಮನಗರ ಸಮೀಪ ರಸ್ತೆಗೆ ಉರುಳಿದ ಮರ

ವಿರಾಜಪೇಟೆ: ವಿಪರೀತ ಗಾಳಿ ಹಾಗೂ ಮಳೆಯ ಪರಿಣಾಮ ಬೃಹತ್ ಗಾತ್ರದ ಮರವೊಂದು ಕಾಫಿ ತೋಟದಿಂದ ರಸ್ತೆಯ ಮೇಲೆ ಬಿದ್ದ ಘಟನೆ ರಾಮನಗರ ಸಮೀಪದ ಜಲಕೊಲ್ಲಿಯಲ್ಲಿ ಸಂಭವಿಸಿದೆ. ಮರವು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು ಕಂಬವು ಧರೆಗೆ ಉರುಳಿದೆ. ಈ ಸಂದರ್ಭದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳೀಯರು ವಿರಾಜಪೇಟೆಯ ಸೆಸ್ಕ್ ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡಿ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಹಾಗೂ ವಿದ್ಯುತ್ ತಂತಿಯನ್ನು ಸಮರ್ಪಕವಾಗಿ ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.