ಶ್ವಾನ ದಾಳಿಗೆ ಗಾಯಗೊಂಡ ಜಿಂಕೆ! ಗ್ರಾಮಸ್ಥರಿಂದ ರಕ್ಷಣೆ :ಚೆಟ್ಟಳ್ಳಿ ಸಮೀಪದ ಕಂಡಕರೆಯಲ್ಲಿ ಘಟನೆ

ಶ್ವಾನ ದಾಳಿಗೆ ಗಾಯಗೊಂಡ ಜಿಂಕೆ! ಗ್ರಾಮಸ್ಥರಿಂದ ರಕ್ಷಣೆ  :ಚೆಟ್ಟಳ್ಳಿ ಸಮೀಪದ ಕಂಡಕರೆಯಲ್ಲಿ ಘಟನೆ

ಮಡಿಕೇರಿ: ಶ್ವಾನಗಳ ದಾಳಿಯಿಂದ ಗಂಭೀರ ಗಾಯಗೊಂಡ ಜಿಂಕೆಯೊಂದನ್ನು ಗ್ರಾಮಸ್ಥರು ಜಿಂಕೆಯೊಂದನ್ನು ರಕ್ಷಿಸಿದ ಘಟನೆ ಚೆಟ್ಟಳ್ಳಿ ಸಮೀಪದ ಕಂಡಕರೆಯಲ್ಲಿ ನಡೆದಿದೆ.ಬೆಳಗ್ಗಿನ ಜಾವ,ಅರಣ್ಯದಿಂದ ಐದಾರು ಶ್ವಾನಗಳು ಸೇರಿ ಜಿಂಕೆಯನ್ನು ದಾಳಿ ಮಾಡಿ ಗಂಭೀರ ಗಾಯಗೊಳಿಸಿತು.ಶ್ವಾನಗಳಿಂದ ಜಿಂಕೆಯನ್ನು ರಕ್ಷಿಸಿ,ಕೂಡಲೇ ಕಂಡಕರೆಯ ಸಿದ್ದೀಕ್ ಅವರ ಮನೆಯಲ್ಲಿ‌ ಕಟ್ಟಿ ಹಾಕಿ ಪ್ರಥಮ ಚಿಕಿತ್ಸೆ ನೀಡಲಾಯಿತು.

ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.ಅರಣ್ಯ ಇಲಾಖಾ ಅಧಿಕಾರಿಗಳು ಆಗಮಿಸಿ ಹೆಚ್ಚಿನ ಚಿಕಿತ್ಸಾಗಿ ಪಶು ಆಸ್ಪತ್ರೆಗೆ ಜಿಂಕೆಯನ್ನು ರವಾನಿಸಲಾಗಿದೆ.ಶ್ವಾನಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸಿದ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.