ಸಿದ್ದಾಪುರ: ಕಾಡಾನೆ ದಾಳಿ :-ಕಾರು ಹಾಗೂ ಬೈಕ್ ಸಂಪೂರ್ಣ ಜಖಂ
ಸಿದ್ದಾಪುರ :-ವಿರಾಜಪೇಟೆ ತಾಲ್ಲೂಕು ಮಾಲ್ದಾರೆ ಗ್ರಾಮ ಪಂ. ವ್ಯಾಪ್ತಿಯ ಮಾಲ್ದಾರೆ, ಹಾಗೂ ಮಠ ಗ್ರಾಮದಲ್ಲಿ ಕಾರು ಹಾಗೂ ಬೈಕ್ ಮೇಲೆ ಶುಕ್ರವಾರ ಕಾಡಾನೆ ದಾಳಿ ಮಾಡಿ ಸಂಪೂರ್ಣ ಜಖಂಗೊಳಿಸಿದೆ.
ಮಠ ಗ್ರಾಮದ ಹೇಮಂತ್ ಮನೆಯ ಸಮೀಪ ನಿಲ್ಲಿಸಿದ ಕಾರಿನ ಮೇಲೆ ಪಕ್ಕದಲ್ಲಿಯೇ ಇದ್ದ ತೆಂಗಿನ ಮರ ತಳ್ಳಿ ಹಾಕಿ ಕಾರು ಸಂಪೂರ್ಣ ಜಖಂಗೊಳಿಸಿದೆ ಈ ಇಂದೆ ಕೊಡ ಇವರ ಬೈಕ್ ನ್ನು ಜಖಂಗೊಳಿಸಿತ್ತು ಸ್ಥಳಕ್ಕೆ ತಿತುಮತಿ ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಶಶಿ,ಹಾಗೂ ಆರ್. ಆರ್. ಟಿ. ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೈಕ್ ಜಖಂ:
ಮಾಲ್ದಾರೆ ಗ್ರಾಮದ ಆಸ್ತಾನ ಹಾಡಿಯ ರಮೇಶ್ ಎಂಬುವರ ಬೈಕ್ ಮಾಲ್ದಾರೆ ಮುತ್ತಪ್ಪ ಹಾಗೂ ಗಣಪತಿ ದೇವಸ್ಥಾನ ಪಕ್ಕ ಇರುವ ನಾಯಡ ವಿಜು ನವರ ತೋಟದ ಪಕ್ಕ ನಿಲ್ಲಿಸಲಾಗಿತ್ತು ಬೆಳಿಗ್ಗೆ ಕಾಡಾನೆ ಬೈಕ್ ನ ಮೇಲೆ ದಾಳಿ ನಡೆಸಿ ಬೈಕ್ ನ್ನು ಸಂಪೂರ್ಣ ಜಖಂಗೊಳಿಸಿದೆ ಹಾಗೂ ತೋಟ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲು ಕಾಡಾನೆ ದಾಳಿಗೆ ಯತ್ನಿಸಿದೆ ಕಾಡಾನೆದಾಳಿಯಿಂದ ತಪ್ಪಿಸಿಕೊಳ್ಳಲು ಕಾರ್ಮಿಕರು ಓಡಿ ಪ್ರಾಣಪಾಯದಿಂದ ಪಾರಾಗಿದ್ದಾರೆ ಕಾಡಾನೆ ತೋಟದಲ್ಲಿ ಬೀಡು ಬಿಟ್ಟಿದ್ದು ಕಾಡಾನೆಯನ್ನು ಕಾಡಿಗೆ ಗಟ್ಟುವ ಕಾರ್ಯಾಚರಣೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.