ಸುಂಟಿಕೊಪ್ಪ: ಹರಪಳ್ಳಿ ರವೀಂದ್ರ ಅವರಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಸುಂಟಿಕೊಪ್ಪ: ಹರಪಳ್ಳಿ ರವೀಂದ್ರ ಅವರಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಸುಂಟಿಕೊಪ್ಪ: ಕೊಡಗರಹಳ್ಳಿ ಹಾಗೂ ಸುಂಟಿಕೊಪ್ಪ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಸಮಾಜ ಸೇವಕ ಹರಪಳ್ಳಿ ರವೀಂದ್ರ ಅವರು, ಸಾವಿರಾರು ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದರು.ಬಡತನದಿಂದ ಯಾವೊಬ್ಬ ಮಗುವು ಕೂಡ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸಮಾಜ ಸೇವಕರು ಹಾಗೂ ದಾನಿಗಳು ಮತ್ತು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹರಪಳ್ಳಿ ರವೀಂದ್ರ ಅವರು ಕಳೆದ 25 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈ ಸೇವೆ ಸಲ್ಲಿಸುತ್ತಿದ್ದಾರೆ.ಬೆಂಗಳೂರಿನಿಂದ ತಮ್ಮದೇ ವಾಹನದಲ್ಲಿ ನೋಟ್ ಪುಸ್ತಕಗಳನ್ನು ತಂದು ಖುದ್ದು ತಾವೇ ಶಾಲೆಗಳಿಗೆ ತೆರಳಿ ಪುಸ್ತಕ ನೀಡುತ್ತಿದ್ದು ಬಡ ಮಕ್ಕಳ ಪಾಲಿಗೆ ವಿದ್ಯಾ ದಾನಿಯಾಗಿದ್ದಾರೆ. 

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹರಪಳ್ಳಿ ರವೀಂದ್ರ ಅವರು ಸಾಮಾಜಿಕ ಸೇವಾ ಕಾರ್ಯಗಳನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸುವೆ ಅದೇ ರೀತಿ ಸುಂಟಿಕೊಪ್ಪ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹರಪಳ್ಳಿ ರವೀಂದ್ರ ಅವರಿಗೆ ಸಭಾಂಗಣದಲ್ಲಿ ಶಾಲು ಹೊದಿಸಿ ನೀಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ, ಮಾತನಾಡಿದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರು ಪ್ರಸಾದ್ ಕುಟ್ಟಪ್ಪ, ಹರಪಳ್ಳಿ ರವೀಂದ್ರ ಅವರು ಕಳೆದ 25 ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಅದರಲ್ಲೂ ಸರ್ಕಾರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೋಟ್ ಪುಸ್ತಕ ವಿತರಣೆ ಮಾಡಿಕೊಂಡು ಬರುತ್ತಿದ್ದು, ಇವರ ಸ್ವಂತ ದುಡಿಮೆ ಹಣದಿಂದ ದಾನ ಧರ್ಮ ಮಾಡಿ, ಉತ್ತಮ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ.

  ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಆಲಿಕುಟ್ಟಿ ಮಾತನಾಡಿ, ಸಮಾಜ ಸೇವಕರಾದ ಹರಪಳ್ಳಿ ರವೀಂದ್ರ ಅವರು ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡುತ್ತಿದ್ದು ಅಷ್ಟೇ ಅಲ್ಲ ಕೊಡುಗೈ ದಾನಿ ಎಂದು ಕೊಡಗಿನಲ್ಲಿ ಮನೆ ಮಾತಾಗಿದ್ದಾರೆ.ಅವರ ಕಾರ್ಯವೈಖರಿಗೆ ಕೊಡಗಿನ ಜನ ಮೆಚ್ಚುಗೆಗೆ ವ್ಯಕ್ತಪಡಿಸಿದ್ದಾರೆ. ಕುಗ್ರಾಮಗಳು ಹಾಗೂ ಗ್ರಾಮೀಣ ಭಾಗದ ಕೃಷಿಕರು ಕೂಲಿ ಕಾರ್ಮಿಕರು ಮಕ್ಕಳಿಗೆ ಸಮಾಜ ಸೇವಕರು ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ಕಳೆದ 25 ವರ್ಷಗಳಿಂದ ನೋಟ್ ಪುಸ್ತಕ ವಿತರಣೆ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.

 ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದ್ಯಸ ಶಬೀರ್ ಮಾತನಾಡಿ, ಬಡತನದಿಂದ ಯಾವೊಬ್ಬ ಮಗು ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರವೀಂದ್ರ ಅವರು ಪ್ರತಿ ವರ್ಷ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ವಿತರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

 ಇದೇ ಸಂದರ್ಭದಲ್ಲಿ ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಫೀಕ್ ಖಾನ್ ಉಪಾಧ್ಯಕ್ಷರಾದ ಗೀತಾ, ಶಿಕ್ಷಕರಾದ ನಂದ,ಸೌಭಾಗ್ಯ, ಚಂದ್ರವತಿ, ಉಷಾ,ಇಂದಿರಾ, ವರ್ಣಿತ, ಹಾಗೂ. ಕೊಡಗರಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ, ಶಿಕ್ಷಕರಾದ ಶಿವಪ್ಪ. ಹಾಗೂ ಹರಪಳ್ಳಿ ಅಭಿಮಾನಿ ಬಳಗದ ಸಂಚಾಲಕರಾದ ಕಾಸಿಮ್ ಹರಪಳ್ಳಿ ಸ್ನೇಹಿತರ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಕೆಕೆ ಹರೀಶ್. ಸುರೇಶ್ ಉಪಸ್ಥಿತರಿದ್ದರು.