ಸುಂದರನಗರ, ವಿನಾಯಕ ಬಡಾವಣೆ, ಬಸವೇಶ್ವರ ಬಡಾವಣೆಯಲ್ಲಿ 10 ಲಕ್ಷರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ: ಪರಿಶೀಲನೆ

ಕುಶಾಲನಗರ: ಕೂಡುಮಂಗಳೂರು ಗ್ರಾ.ಪಂ ನ ಎರಡನೇ ವಾರ್ಡ್ ಗೆ ಒಳಪಡುವ ಸುಂದರನಗರ, ವಿನಾಯಕ ಬಡಾವಣೆ ಹಾಗೂ ಬಸವೇಶ್ವರ ಬಡಾವಣೆಯಲ್ಲಿ 10 ಲಕ್ಷ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಕಾಮಗಾರಿಗಳನ್ನು ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಪಿಡಿಓ ಸಂತೋಷ್ ಅವರು ಪರಿಶೀಲನೆ ನಡೆಸಿದರು.
೫೦:೫೪ ನ ಅನುದಾನದಡಿ ಸುಂದರನಗರದ ಕೋರೆ ರಸ್ತೆಯಲ್ಲಿ ೩.೫ ಲಕ್ಷರೂಗಳ ಡಾಂಬರು ರಸ್ತೆ ಅಭಿವೃದ್ಧಿ, ವಿನಾಯಕ ಬಡಾವಣೆಯಲ್ಲಿ ೩.೫ ಲಕ್ಷ ರೂಗಳ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಹಾಗೂ ಬಸವೇಶ್ವರ ಬಡಾವಣೆಯಲ್ಲಿ ೩ ಲಕ್ಷ ರೂ ಗಳ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ.
ಈ ಕುರಿತು ಮಾತನಾಡಿದ ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಸುಂದರನಗರ ವಾರ್ಡ್ ನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ೨ ಕೋಟಿಗೂ ಹೆಚ್ಚು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಇದೀಗ ೫೦:೫೪ ಅನುದಾನದಲ್ಲಿ ೧೦ ಲಕ್ಷ ರೂ ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಸಲಾಗಿದೆ. ಮಾನ್ಯ ಶಾಸಕರ ಬಳಿ ಮತ್ತಷ್ಟು ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದು, ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದರಂತೆ ಗುಡ್ಡ ಪ್ರದೇಶವಾದ ನವಗ್ರಾಮದಲ್ಲಿ ೨೫ ಲಕ್ಷ ರೂ ಗಳ ಕಾಂಕ್ರೀಟ್ ರಸ್ತೆ ಕಾಮಗಾರಿ ಅತೀ ಶೀಘ್ರದಲ್ಲಿ ನಡೆಸಲಾಗುವುದು ಎಂದರು.
ಈ ಸಂದರ್ಭ ಬಿಲ್ ಕಲೆಕ್ಟರ್ ಅವಿನಾಶ್, ಸುಂದರನಗರ, ವಿನಾಯಕ ಬಡಾವಣೆ ಹಾಗೂ ಬಸವೇಶ್ವರ ಬಡಾವಣೆಯ ಗ್ರಾಮಸ್ಥರು ಇದ್ದರು.