ಹುದಿಕೇರಿಯಲ್ಲಿ ಸುಸಜ್ಜಿತವಾದ ಹಾಕಿ ಮೈದಾನ ನಿರ್ಮಾಣ ಸಾಧ್ಯತೆ ಬಗ್ಗೆ ಚರ್ಚಿಸಿದ: ಎ.ಎಸ್ ಪೊನ್ನಣ್ಣ

ಹುದಿಕೇರಿಯಲ್ಲಿ ಸುಸಜ್ಜಿತವಾದ ಹಾಕಿ ಮೈದಾನ ನಿರ್ಮಾಣ ಸಾಧ್ಯತೆ ಬಗ್ಗೆ ಚರ್ಚಿಸಿದ: ಎ.ಎಸ್ ಪೊನ್ನಣ್ಣ

ಪೊನ್ನಂಪೇಟೆ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಇಂದು ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿಯ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಮೈದಾನದ ವೀಕ್ಷಣೆ ಹಾಗೂ ಪರಿಶೀಲನೆ ಕೈಗೊಂಡರು.    

ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಚಟುವಟಿಕೆಗಳಿಗೆ ಮಹತ್ವವನ್ನು ನೀಡುತ್ತಿರುವ ಮಾನ್ಯ ಶಾಸಕರು ಸದರಿ ಮೈದಾನದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಇಂದು ಭೇಟಿ ನೀಡಿ ಪರಿಶೀಲಿಸಿದ ಶಾಸಕರು ಶಾಲೆಯ ಅಧ್ಯಾಪಕರು, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಂದ ಅಗತ್ಯ ಮಾಹಿತಿಯನ್ನು ಪಡೆದರು. ಬಳಿಕ ತಮ್ಮ ಸಲಹೆ ಸೂಚನೆಗಳನ್ನು ನೀಡಿ, ಮಕ್ಕಳ ಕ್ರೀಡಾ ಭವಿಷ್ಯದ ದೃಷ್ಟಿಯಿಂದ ಮೈದಾನದ ಉನ್ನತೀಕರಣ ಹಾಗೂ ಸೌಲತ್ತುಗಳ ಒದಗಿಸುವುದು ತನ್ನ ಪ್ರಥಮ ಆದ್ಯತೆಯಾಗಿದ್ದು, ಮಕ್ಕಳಿಗೆ ಅನುಕೂಲ ಆಗುವಂತೆ ಎಲ್ಲಾ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಸದ್ರಿ ಶಾಲಾ ಮೈದಾನವನ್ನು ಉನ್ನತೀಕರಣಗೊಳಿಸಿ, ಹಾಕಿ ಆಟಕ್ಕೆ ಮೈದಾನ ನಿರ್ಮಿಸುವ ಬಗ್ಗೆ ಚರ್ಚಿಸಿದರು. 2027 ರಲ್ಲಿ ಅಜ್ಜಿಕುಟ್ಟಿರ ಕುಟುಂಬದವರು ಹಮ್ಮಿಕೊಂಡಿರುವ ಹಾಕಿ ಉತ್ಸವವನ್ನು ಇದೇ ಮೈದಾನದಲ್ಲಿ ನಡೆಸಲು ಚಿಂತಿಸುತ್ತಿರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು. ವೈಜ್ಞಾನಿಕವಾಗಿ ಎಲ್ಲವನ್ನು ಪರಿಶೀಲಿಸಿ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ಮಾಧ್ಯಮದವರಿಗೆ ತಿಳಿಸಿದರು.    

ಈ ಸಂದರ್ಭದಲ್ಲಿ ಚೀಫ್ ಎಲೆಟ್ರಿಕಲ್ ಆಫೀಸರ್ ತಿತೀರ ರೋಷನ್ ಅಪ್ಪಚ್ಚು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಿದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೂರಜ್,ಅಜ್ಜಿಕುಟ್ಟಿರ ಗಿರೀಶ್, ಹಿರಿಯ ಮುಖಂಡರಾದ ಚೇಕ್ಕೇರ ವಾಸು ಕುಟ್ಟಪ್ಪ, ಚೆಕ್ಕೇರ ಸುಧೀರ್, ಪಕ್ಷದ ಪ್ರಮುಖರು,ಸ್ಥಳೀಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.