ಹೆಬ್ಬಾಲೆ:ಗಬ್ಬೆದ್ದು ನಾರುತ್ತಿರುವ ಚರಂಡಿ! ಸಾಂಕ್ರಾಮಿಕ ರೋಗಗಳು ಹರಡುವ ಭೀತಿ!

ಹೆಬ್ಬಾಲೆ:ಗಬ್ಬೆದ್ದು ನಾರುತ್ತಿರುವ ಚರಂಡಿ!  ಸಾಂಕ್ರಾಮಿಕ ರೋಗಗಳು ಹರಡುವ ಭೀತಿ!
ಹೆಬ್ಬಾಲೆ:ಗಬ್ಬೆದ್ದು ನಾರುತ್ತಿರುವ ಚರಂಡಿ!  ಸಾಂಕ್ರಾಮಿಕ ರೋಗಗಳು ಹರಡುವ ಭೀತಿ!

ಕೂಡಿಗೆ: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಿ ನೋಡಿದರು ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ,ಮಳೆ ಹಾಗೂ ಮನೆಗಳಲ್ಲಿನ ನೀರು ರಸ್ತೆಯ ಗುಂಡಿಗಳಲ್ಲಿ ನಿಂತು ಸೊಳ್ಳೆಗಳು ಉತ್ಪಾದನೆಯಾಗಿ ರೋಗಗಳು ಹರಡುವ ಭೀತಿಯಲ್ಲಿ ಜನರ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ.ಈ ಬಗೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರು ಸಮಸ್ಯೆ ನಿವಾರಿಸಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಹೆಬ್ಬಾಲೆ ಗ್ರಾಮ ಪಂಚಾಯಿತಿ ಆವರಣದ ಮುಂಭಾಗ ಚರಂಡಿ ಗಬ್ಬೆದ್ದು ನಾರುತಿದ್ದರು ಕೂಡ ಸ್ಥಳೀಯ ಗ್ರಾಮಪಂಚಾಯಿತಿ ಆಡಳಿತ ಮಂಡಳಿ ಮಾತ್ರ ಇತ್ತ ಕಡೆ ಗಮನ ಹರಿಸುತ್ತಿಲ್ಲ.  ಚರಂಡಿ ನೀರು ಕೊಳೆತು ಗಬ್ಬೆದ್ದು ನಾರುತ್ತಿದ್ದು ,ದಿನದಿಂದ ದಿನಕ್ಕೆ. ಸೊಳ್ಳೆಗಳ ಕಾಟ ಹೆಚ್ಚುತ್ತಿದೆ ಇದರಿಂದ ರಾತ್ರಿ ವೇಳೆ ಈ ವ್ಯಾಪ್ತಿಯ ನಿವಾಸಿಗಳ ಗೋಳು ಕೇಳುವವರೇ ಇಲ್ಲದಂತೆ ಆಗಿದೆ.ಪಂಚಾಯಿತಿಯು, ಸ್ವಚ್ಛತೆ ಕಾಪಾಡಬೇಕು ಜವಾಬ್ದಾರಿ ಮರೆತು ಮೌನಕ್ಕೆ ಶರಣಾಗಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಸ್ವಚ್ಛತೆ ಇಲ್ಲ. ಎಲ್ಲಾ ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತ ನೀರು ನಿಂತಲ್ಲೇ ನಿಲ್ಲುತ್ತಿವೆ. ಮಳೆಗಾಲದಲ್ಲಂತೂ ಇಲ್ಲಿ ಓಡಾಡಲು ಆಗುವುದಿಲ್ಲ. ಕೊಳಚೆ ನೀರು ನಿಂತು ಸೊಳ್ಳೆ ಕಾಟ ದುರ್ವಾಸನೆಯಿಂದ ನಿವಾಸಿಗಳು ನಿತ್ಯ ನರಕಾಯತೆ ಅನುಭವಿಸುತ್ತಿದ್ದಾರೆ.ಮಕ್ಕಳು ವಯೋವೃದ್ಧರು ಓಡಾಡಲಾಗದಂತಹ ಪರಿಸ್ಥಿತಿ‌‌ ಇದೆ ಎಂದು ಹೆಬ್ಬಾಲೆ ಗ್ರಾಮಸ್ಥರು ಗ್ರಾಮ‌ ಪಂಚಾಯತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.