ಹೊಸತೋಟದಿಂದ ಕುಂಬೂರು ಮಾದಾಪುರ ರಸ್ತೆ ಕಳಪೆ ಕಾಮಗಾರಿ: ಮರುಡಾಂಬರೀಕಣ ಕಾಮಗಾರಿಗೆ ಯಾವುದೇ ಬಿಲ್ಲನ್ನು ನೀಡುವುದಿಲ್ಲ: ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಡಿಕೇರಿ

May 22, 2025 - 13:28
May 22, 2025 - 13:39
 0  48
ಹೊಸತೋಟದಿಂದ ಕುಂಬೂರು ಮಾದಾಪುರ ರಸ್ತೆ ಕಳಪೆ ಕಾಮಗಾರಿ:   ಮರುಡಾಂಬರೀಕಣ ಕಾಮಗಾರಿಗೆ ಯಾವುದೇ ಬಿಲ್ಲನ್ನು ನೀಡುವುದಿಲ್ಲ: ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಡಿಕೇರಿ

ಮಡಿಕೇರಿ: ಜಾಲತಾಣದಲ್ಲಿ ಹರಿದಾಡುತ್ತಿರುವ ಹೊಸತೋಟದಿಂದ ಕುಂಬೂರು ಮಾದಾಪುರ ರಸ್ತೆ ಕಳಪೆ ಕಾಮಗಾರಿಗೆ ಸಂಬಂಧಪಟ್ಟಂತೆ, ಸದರಿ ರಸ್ತೆಯು ನಮ್ಮ ಗ್ರಾಮ ನಮ್ಮ ರಸೆಯ ಯೋಜನೆ ಹಂತ-4 ರಲ್ಲಿ ಕೈಗೊಳ್ಳಲಾಗಿರುತ್ತದೆ. ರಸೆ ಕಾಮಗಾರಿಯು 2016-17 ರಲ್ಲಿ ಅನುಮೋದನೆಗೊಂಡು 31-03-2020 ರಂದು ಪೂರ್ಣಗೊಂಡಿರುತ್ತದೆ. ರಸೆಯನ್ನು ಐದು ವರ್ಷಗಳ ವಾರ್ಷಿಕ ನಿರ್ವಹಣೆ ಮಾಡಿ 6ನೇ ವರ್ಷಕ್ಕೆ ಮರು ಡಾಂಬರೀಕರಣ ಮಾಡಬೇಕಾಗಿದ್ದು, ಅದರಂತೆ ಗುತ್ತಿಗೆದಾರರು ಏಪ್ರಿಲ್ ತಿಂಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸದೆ ಮಳೆಗಾಲ ಪ್ರಾರಂಭವಾಗುವ ಮೇ ತಿಂಗಳಿನಲ್ಲಿ ಪ್ರಾರಂಭಿಸಲಾಗಿ ಹಾಗೂ ಅದೇ ದಿನದಂದು ಮಳೆ ಬಂದ ಕಾರಣ ಡಾಂಬರು ಹಾಳಾಗಿರುತ್ತದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆ ಮೇರೆಗೆ ಸುಮಾರು 0.60 ಕಿ.ಮೀ ನಷ್ಟು ಮಾಡಿರುವ ಡಾಂಬರನ್ನು ತೆಗೆದು ಮಳೆಗಾಲ ಮುಗಿದ ನಂತರ ಪ್ರಾರಂಭಿಸಲು ಗುತ್ತಿಗೆದಾರರಿಗೆ ನೋಟೀಸ್ ನೀಡಲಾಗಿರುತ್ತದೆ. ಸದರಿ ನಡೆದಿರುವ ಮರುಡಾಂಬರೀಕರಣ ಕಾಮಗಾರಿಗೆ ಯಾವುದೇ ಬಿಲ್ಲನ್ನು ಪಾವತಿಸಿರುವುದಿಲ್ಲ. ಸದರಿ ರಸ್ತೆಯು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ ಕೈಗೊಳ್ಳಲಾಗಿದ್ದು, ಜಿಲ್ಲಾ ಪಂಚಾಯತ್‌ಗೆ ಯಾವುದೇ ರೀತಿಯ ಸಂಬಂಧವಿರುವುದಿಲ್ಲವೆಂದು,ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ಉಪವಿಭಾಗ ಮಡಿಕೇರಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0