ಕೊಡಗು ಜಿಲ್ಲೆಯಲ್ಲಿ ವಾಯು-ವರುಣನ ಆರ್ಭಟ: ಒಂದು ವಾರದಲ್ಲಿ 594 ವಿದ್ಯುತ್ ಕಂಬಗಳಿಗೆ ಹಾನಿ

ಕೊಡಗು ಜಿಲ್ಲೆಯಲ್ಲಿ ವಾಯು-ವರುಣನ ಆರ್ಭಟ: ಒಂದು ವಾರದಲ್ಲಿ 594 ವಿದ್ಯುತ್ ಕಂಬಗಳಿಗೆ ಹಾನಿ

ಮಡಿಕೇರಿ(Coorgdaily): ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ವಿದ್ಯುತ್ ಮಾರ್ಗಗಳು ಕಂಬಗಳು, ಪರಿವರ್ತಕಗಳು ಹಾನಿಗೊಳಗಾಗಿದ್ದು ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 594 ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.ನಿಗಮದ ನಿರ್ವಹಣಾ ಸಿಬ್ಬಂದಿಗಳು ಹಗಲಿರುಳು ವಿದ್ಯುತ್ ಮಾರ್ಗದ ದುರಸ್ಥಿ ಕಾರ್ಯವನ್ನು ನಿರ್ವಹಿಸಲು ಶ್ರಮಿಸುತ್ತಿದ್ದೂ,ಅತೀ ಹೆಚ್ಚು ಗಾಳಿ ಮಳೆಯಿಂದಾಗಿ ದುರಸ್ಥಿ ಕಾರ್ಯಕ್ಕೆ ತೊಂದೆಯುಂಟಾಗಿದೆ.ನಿರಂತರವಾಗಿ ವಿದ್ಯುತ್ ಮಾರ್ಗದ ದುರಸ್ಥಿ ಕಾರ್ಯವನ್ನು ನಿರ್ವಹಿಸುತ್ತಿದ್ದು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.