ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು!!! ಹಾಸನದಲ್ಲಿ ಘಟನೆ
ಹಾಸನ : ತಾಳಿ ಕಟ್ಟುವ ವೇಳೆ ಕೊನೆಯ ಕ್ಷಣದಲ್ಲಿ ವಧು ಮದುವೆ ನಿಲ್ಲಿಸಿದ ಘಟನೆ ಹಾಸನದಲ್ಲಿ ನಡೆದಿದೆ.ಮದುವೆ ಕನಸು ಕಂಡು ಹೊಸ ಜೀವನಕ್ಕೆ ಕಾಲಿಡುತ್ತಿದ್ದ ವರನಿಗೆ ಆಘಾತವುಂಟಾಗಿದೆ.ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಮದುವೆ ಬೇಡ ಎಂದು ಹಠ ಹಿಡಿದ ಘಟನೆ ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.ಹಾಸನ ತಾಲ್ಲೂಕಿನ, ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಜೊತೆ ಇಂದು ಮದವೆ ನಿಶ್ಚಯವಾಗಿತ್ತು.ಮುಹೂರ್ತದ ವೇಳೆ ವಧುವಿಗೆ ಕರೆವೊಂದು ಬಂದಿತ್ತು,ತಕ್ಷಣವೇ ಮದುವೆ ಬೇಡ ಎಂದು ರೂಂಗೆ ಹೋಗಿ ಬಾಗಿಲು ಹಾಕಿಕೊಂಡಳು.ಮದುವೆಗೆ ವಧು ತೀವ್ರ ವಿರೋಧ ವ್ಯಕ್ತಪಡಿಸಿದಳು,ಯುವತಿ ಮನವೊಲಿಸಲು ಶತಾಯಗತಾಯ ಪ್ರಯತ್ನಪಟ್ಟರು ಕೂಡ ಪೋಷಕರು ಯಶಸ್ಸು ಕಾಣಲಿಲ್ಲ.ಪೊಲೀಸರು ಮಧ್ಯೆ ಪ್ರವೇಶಿಸಿದರು ಕೂಡ ಯುವತಿ ಮನಸ್ಸು ಬದಲಾಯಿಸಲಿಲ್ಲ.ಮದುವೆ ಬೇಡವೇ ಬೇಡ ಎಂದು ಹಠ ಹಿಡಿದು ಬಿಟ್ಟಳು.ಯುವತಿ ಹಠ ಮಾಡಿದ್ದಕ್ಕೆ ನನಗೂ ಈ ಮದುವೆ ಬೇಡ ಎಂದು ವರನೂ ಕೂಡ ಹೊರ ನಡೆದನು.ವಧುವಿಗೆ ಬೇರೆ ಹುಡುಗನೊಂದಿಗೆ ಪ್ರೇಮ ಇತ್ತು ಎನ್ನಲಾಗಿದ್ದು,ತಾಳಿ ಕಟ್ಟುವ ವೇಳೆ ವಧುವಿಗೆ ಲವ್ವರ್ ಬಾಯ್ ಕರೆ ಮಾಡಿದ್ದಾನೆ ಎನ್ನಲಾಗುತ್ತಿದೆ.
