"ನೀವು ಮೈಗ್ರೇನ್ ತಲೆನೋವಿನಿಂದ ಬಳುತ್ತಿದ್ದೀರಾ!

"ನೀವು ಮೈಗ್ರೇನ್ ತಲೆನೋವಿನಿಂದ ಬಳುತ್ತಿದ್ದೀರಾ!

 ನೀವು ಮೈಗ್ರೇನ್‌ (ಅರ್ಧ ತಲೆನೋವಿ)‌ನಿಂದ ಬಳಲುತ್ತಿದ್ದರೆ, ಪರಿಹಾರವನ್ನು ಪಡೆಯಲು ಈ ಕೆಳಗಿನ ನಾಲ್ಕು ಮನೆ ಮದ್ದುಗಳು. ಮನೆಯಲ್ಲಿ ಸಿಗುವ ವಸ್ತುಗಳಿಂದ ಆರೋಗ್ಯ ಭಾಗ್ಯ ಪಡೆದುಕೊಳ್ಳಲು ಅಮ್ಮನ ಮನೆ ಮದ್ದು.

1. ದೇಶಿ (ನಾಟಿ ಹಸುವಿನ) ತುಪ್ಪ:

ಮೈಗ್ರೇನ್ ನೋವಿನಿಂದ ಪರಿಹಾರ ಪಡೆಯಲು ಪ್ರತಿದಿನ 2 ಹನಿ ಶುದ್ಧ ದೇಸಿ ತುಪ್ಪವನ್ನು ಮೂಗಿನಲ್ಲಿ ಬಿಡಿ. ಇದು ನಿಮಗೆ ನೋವಿನಿಂದ ಪರಿಹಾರವನ್ನು ನೀಡುತ್ತದೆ.

2 ಸೇಬು: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ತಿನ್ನಿರಿ. ಮೈಗ್ರೇನ್ ಅನ್ನು ತೊಡೆದುಹಾಕಲು ಇದು ತುಂಬಾ ಪರಿಣಾಮಕಾರಿ ಪರಿಹಾರವಾಗಿದೆ.

3.ಲವಂಗ ಪುಡಿ: ತಲೆ ತುಂಬಾ ನೋಯುತ್ತಿದ್ದರೆ ತಕ್ಷಣ ಲವಂಗದ ಪುಡಿ ಮತ್ತು ಉಪ್ಪನ್ನು ಬೆರೆಸಿ ಹಾಲಿನೊಂದಿಗೆ ಕುಡಿಯಿರಿ. ಹೀಗೆ ಮಾಡುವುದರಿಂದ ತಲೆನೋವು ತಕ್ಷಣ ಮಾಯವಾಗುತ್ತದೆ.

4.ಪಾಲಕ್ ಸೊಪ್ಪಿನ ರಸ ,ಮತ್ತು ಕ್ಯಾರೆಟ್ ರಸಮೈಗ್ರೇನ್ ನೋವಿನಿಂದ ಪರಿಹಾರ ಪಡೆಯಲು ಉತ್ತಮ ಔಷಧಿ. ಪಾಲಕ್ ಮತ್ತು (ನಾಟಿ) ಕ್ಯಾರೆಟ್ ಜ್ಯೂಸ್ ಮೈಗ್ರೇನ್ ತೊಂದರೆಯವರು ನಿತ್ಯವೂ ಕುಡಿದರೆ ಅಥವಾ ನೋವಿನ ಸಮಯದಲ್ಲಿ ಕುಡಿದರೆ ನಿಮ್ಮ ಮೈ ಗ್ರೀನ್ ಸಮಸ್ಯೆ ನಿಮಿಷಗಳಲ್ಲಿ ನಿವಾರಣೆಯಾಗುತ್ತದೆ.

(ಮಾಹಿತಿ: ವನಿತಾ ಚಂದ್ರಮೋಹನ್ ಕುಶಾಲನಗರ)