ಮಕ್ಕಳು ಮಾತನಾಡುವಾಗ ತೊದಲುತ್ತಿದ್ದಾರಾ? ಬೆಸ್ಟ್ ಮನೆ ಮದ್ದು ಇಲ್ಲಿದೆ ನೋಡಿ

ಮಕ್ಕಳು ಮಾತನಾಡುವಾಗ ತೊದಲುತ್ತಿದ್ದಾರಾ?  ಬೆಸ್ಟ್ ಮನೆ ಮದ್ದು ಇಲ್ಲಿದೆ ನೋಡಿ

(ಮಾಹಿತಿ: ವನಿತಾ ಚಂದ್ರಮೋಹನ್ ಕುಶಾಲನಗರ)

ದಿನ ಬೆಳಿಗ್ಗೆ ನೆಲ್ಲಿಕಾಯಿ ಪೇಸ್ಟ್ ಅನ್ನು ಕಲ್ಲು ಸಕ್ಕರೆ ಹಾಗೂ ತುಪ್ಪದಲ್ಲಿ ಬೆರೆಸಿ ನಾಲಿಗೆಗೆ ಸವರಿ ನಿಧಾನವಾಗಿ ಸವಿಯಬೇಕು. ಲವಂಗ,ವೀಳ್ಯದೆಲೆ ಬೇರು, ಏಲಕ್ಕಿ ಸಕ್ಕರೆ, ಓಂ ಕಾಳು, ಕಲ್ಲುಉಪ್ಪು, ಇವುಗಳನ್ನು ರವೆಯತರ ಮಿಕ್ಸಿಯಲ್ಲಿ ಪುಡಿಮಾಡಿ ಇಟ್ಟುಕೊಂಡು ಬೆಳಿಗ್ಗೆ ನಿತ್ಯವೂ ಅರ್ಧ ಚಮಚ ತೆಗೆದುಕೊಂಡು ನಾಲಿಗೆಯನ್ನು ಗಟ್ಟಿಯಾಗಿ ಉಜ್ಜಿ ತೊಳೆಯಬೇಕು ಇದರಿಂದ ನಾಲಿಗೆ ತೆಳುವಾಗುತ್ತದೆ. ಬಾದಾಮಿ ಒಣ ದ್ರಾಕ್ಷಿ ನಿತ್ಯವೂ ಕೊಡಬೇಕು. ಸಿಂಹ ಘರ್ಜನೆ ಯೋಗಾಸನ ಮಾಡಬೇಕು. ಒಬ್ಬರೇ ಕುಳಿತು ನಿಧಾನವಾಗಿ ಯಾವುದಾದರು ಪಠ್ಯಪುಸ್ತಕ ಅಥವಾ ನ್ಯೂಸ್ ಪೇಪರ್ ಅನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪೋಷಕರು ಮಗುವಿನೊಂದಿಗೆ ನಿಧಾನವಾಗಿ ಮಾತನಾಡಬೇಕು. ಮಗುವಿನ ಮಾತು ಪೂರ್ತಿ ಆಗೋವರೆಗೂ ಆಲಿಸಿ ನಂತರ ಉತ್ತರಿಸಬೇಕು. ಮಗುವಿನ ಮಾತುಗಳಲ್ಲಿ ತೊದಲು ಬಂದಾಗ ಗೇಲಿ ಮಾಡಿ ನಗಬಾರದು, ಕುಟುಂಬದ ಸಹಕಾರದಿಂದ ಈ ತೊಂದರೆಯನ್ನು ಸರಿಪಡಿಸಬಹುದು. ಈ ತರಹದ ತೊಂದರೆಗಳು ನಿಧಾನವಾಗಿ ಸರಿಹೊಂದುತ್ತದೆ ಮಗುವಿಗೆ ಭಯ ಆತಂಕ ರಹಿತ ವಾತಾವರಣ ಸೃಷ್ಟಿಸುವುದು ಪೋಷಕರ ಜವಾಬ್ದಾರಿ.