ನೋಡಲು ತನ್ನಂತಿಲ್ಲ ಎಂದು ಮಗನನ್ನೇ ಕೊಂದ ತಂದೆ

Apr 14, 2026 - 22:22
Apr 14, 2026 - 22:23
 0  820
ನೋಡಲು ತನ್ನಂತಿಲ್ಲ ಎಂದು ಮಗನನ್ನೇ ಕೊಂದ ತಂದೆ

ವಿಜಯಪುರ, ಏಪ್ರಿಲ್​ 14: ವಿಜಯಪುರದಲ್ಲೊಂದು ವಿಚಿತ್ರ ಮತ್ತು ಅಮಾನವೀಯ ಘಟನೆ ನಡೆದಿದೆ. ನೋಡಲು ತನ್ನಂತೆ ಇಲ್ಲ ಎಂದು 6 ವರ್ಷದ ತನ್ನ ಮಗನನ್ನೇ ತಂದೆ (Father) ಕೊಲೆ (Kill) ಮಾಡಿರುವಂತಹ ದಾರುಣ ಘಟನೆ ನಗರದಲ್ಲಿ ನಡೆದಿದೆ.

 ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿಯ ಕೃಷ್ಣಾ ನದಿ ಬಳಿ ಮಗ ಸಿದ್ದಾರ್ಥನನ್ನ ಕರೆದುಕೊಂಡು ಹೋದ ತಂದೆ ಮಲ್ಲಿಕಾರ್ಜುನ ಅರಕೇರಿ ನದಿಗೆ ತಳ್ಳಿ ಹತ್ಯೆ ಮಾಡಿದ್ದಾರೆ.ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಮತ್ತು ಭಾಗ್ಯಶ್ರೀ ದಂಪತಿ ವಾಸವಾಗಿದ್ದಾರೆ. ಇವರ ಮಗ ಸಿದ್ದಾರ್ಥ. ಮಗನ ಹೋಲಿಕೆ ನಿನ್ನಂತಿಲ್ಲ ಎಂದು ಗ್ರಾಮದಲ್ಲಿ ಕೆಲವರು ಛೇಡಿಸಿದ್ದರು. ಇದರಿಂದಾಗಿ ರೋಸಿಹೋದ ಮಲ್ಲಿಕಾರ್ಜುನ ಇಂತಹದೊಂದು ಕೆಟ್ಟ ನಿರ್ಧಾರಕ್ಕೆ ಮುಂದಾಗಿದ್ದಾರೆ.

 ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ಹೇಳಿ ಮಲ್ಲಿಕಾರ್ಜುನ ಕರೆದೊಯ್ದಿದ್ದಾರೆ. ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿಗೆ ಕರೆದುಕೊಂಡು ಬಂದಿದ್ದ ತಂದೆ, ಕೃಷ್ಣಾ ನದಿಗೆ ತಳ್ಳಿ ಸಿದ್ದಾರ್ಥನನ್ನು ಹತ್ಯೆಗೈದ್ದಾರೆ. ಬಳಿಕ ಮನೆಯಲ್ಲಿ ಶಾಲೆಗೆ ಸೇರಿಸಿ ಹಾಸ್ಟೆಲ್​ನಲ್ಲಿ ಬಿಟ್ಟಿದ್ದಾಗಿ ಹೇಳಿದ್ದಾರೆ. ಏಪ್ರಿಲ್ 1ರಂದು ಮಗ ಸಿದ್ದಾರ್ಥ ಹುಟ್ಟುಹಬ್ಬ ಇರುವ ಹಿನ್ನೆಲೆ ಮಗನನ್ನು ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರೀ ಪಟ್ಟುಹಿಡಿದಿದ್ದಾರೆ.

ಪೊಲೀಸ್ ವಿಚಾರಣೆ ವೇಳೆ ಅಸಲಿ ಕಹಾನಿ ಬಾಯಿಬಿಟ್ಟ ತಂದೆ ಈ ಬಗ್ಗೆ ಹೆಚ್ಚು ವಿಚಾರಿಸಿದಾಗ ಮಲ್ಲಿಕಾರ್ಜುನ ಮನೆಯಿಂದ ಪರಾರಿ ಆಗಿದ್ದಾರೆ. ಇದರಿಂದ ಅನುಮಾನ ಬಂದು ಭಾಗ್ಯಶ್ರೀ ಪೊಲೀಸರಿಗೆ ದೂರು ನೀಡಿದ್ದಾರೆ.

 ಪೊಲೀಸರ ವಿಚಾರಣೆ ವೇಳೆ ಮಹಾರಾಷ್ಟ್ರದಲ್ಲಿ ಕೊಲೆಗೈದಿರುವುದಾಗಿ ಆರೋಪಿ ಮಲ್ಲಿಕಾರ್ಜುನ ಅಸಲಿ ಸತ್ಯ ಬಾಯಿಬಿಟ್ಟಿದ್ದಾರೆ. ಸದ್ಯ ಆರೋಪಿ ಮಲ್ಲಿಕಾರ್ಜುನ ನನ್ನು ಬಂಧಿಸಿ‌ದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0