ಭಾರತದ ಬೌಲಿಂಗ್ ಮಿಂಚು ; ಆಸ್ಟ್ರೇಲಿಯಾ 119 ರನ್‌ಗಳಿಗೆ ಆಲೌಟ್ | ಸರಣಿಯಲ್ಲಿ ಭಾರತಕ್ಕೆ 2-1 ಮುನ್ನಡೆ

ಭಾರತದ ಬೌಲಿಂಗ್ ಮಿಂಚು ; ಆಸ್ಟ್ರೇಲಿಯಾ 119 ರನ್‌ಗಳಿಗೆ ಆಲೌಟ್ |  ಸರಣಿಯಲ್ಲಿ ಭಾರತಕ್ಕೆ 2-1 ಮುನ್ನಡೆ
Photo credit: X@BCCI

ಕ್ವೀನ್ಸ್‌ಲ್ಯಾಂಡ್: ಭಾರತೀಯ ಬೌಲರ್‌ಗಳ ಅದ್ಭುತ ಪ್ರದರ್ಶನದ ಫಲವಾಗಿ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ನಾಲ್ಕನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೇವಲ 119 ರನ್‌ಗಳಿಗೆ ಆಲೌಟ್ ಆಯಿತು. ಭಾರತವು 48 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಪರ ಶುಭಮನ್ ಗಿಲ್ 46 ರನ್‌ಗಳ ಶ್ರೇಷ್ಠ ಇನ್ನಿಂಗ್ಸ್ ಆಡಿ ತಂಡವನ್ನು 167/8 ರನ್‌ಗಳ ಮೊತ್ತದತ್ತ ಕೊಂಡೊಯ್ದರು. ನಾಯಕ ಸೂರ್ಯಕುಮಾರ್ ಯಾದವ್ 10 ಎಸೆತಗಳಲ್ಲಿ ವೇಗದ 20 ರನ್‌ಗಳನ್ನು ಸೇರಿಸಿದರು. 

ಬೌಲಿಂಗ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ತಲಾ ಎರಡು ವಿಕೆಟ್‌ಗಳನ್ನು ಪಡೆದು ಆಸ್ಟ್ರೇಲಿಯಾದ ಬ್ಯಾಟಿಂಗ್ ಕ್ರಮಾಂಕವನ್ನು ಸದೆಬಡಿದರು. ತಡವಾಗಿ ಬೌಲಿಂಗ್‌ಗೆ ಬಂದ ವಾಷಿಂಗ್ಟನ್ ಸುಂದರ್ ಮೂವರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಆಸ್ಟ್ರೇಲಿಯಾದ ಬ್ಯಾಟರ್‌ ಗಳಿಗೆ ಸಿಂಹಸ್ವಪ್ನವಾದರು.  

ಆಸ್ಟ್ರೇಲಿಯಾ ತನ್ನ ಕೊನೆಯ ಏಳು ವಿಕೆಟ್‌ಗಳನ್ನು ಕೇವಲ 28 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು. ಭಾರತದ ಬೌಲಿಂಗ್ ಶಿಸ್ತು ಮತ್ತು ವೇಗದ ಬೌಲರ್‌ಗಳ ನಿಖರ ದಾಳಿ ಆಸ್ಟ್ರೇಲಿಯವನ್ನು ಇನ್ನಿಲ್ಲದಂತೆ ಕಾಡಿತು.