ದುಬಾರೆ;ಆನೆಗಳ‌ ಕಾದಾಟದಲ್ಲಿ ಗಾಯಗೊಂಡಿದ್ದ ಆನೆ ಸಾವು

May 19, 2026 - 12:26
 0  3.7k
ದುಬಾರೆ;ಆನೆಗಳ‌ ಕಾದಾಟದಲ್ಲಿ ಗಾಯಗೊಂಡಿದ್ದ ಆನೆ ಸಾವು

ಕುಶಾಲನಗರ;ಸೋಮವಾರ (ನಿನ್ನೆ) ದುಬಾರೆಯಲ್ಲಿ ನಡೆದ ಆನೆ ಕಾದಾಟದ ದುರ್ಘಟನೆಯಲ್ಲಿ ತೀವ್ರವಾಗಿ ಘಾಸಿಗೊಂಡಿದ್ದ ಮಾರ್ಥಂಡ ಆನೆ ಇದೀಗ ದುಬಾರೆ ಆನೆ ಶಿಬಿರದಲ್ಲಿ ಮೃತಪಟ್ಟಿದೆ. ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೃತ ಆನೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಗಾಯಗೊಂಡಿದ್ದ ಕಾಡಾನೆಗೆ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಇದೀಗ ಆನೆ ಮೃತಪಟ್ಟಿದೆ. ಕೊಡಗಿನ ದುಬಾರೆ ಪ್ರವಾಸಿ ತಾಣದಲ್ಲಿ ಸೋಮವಾರ ಕಂಜನ್ ಆನೆ ಹಾಗೂ ಮಾರ್ತಾಂಡ ಆನೆ ನಡುವೆ ಕಾದಾಟ ಸಂದರ್ಭ ತಮಿಳುನಾಡು ಮಹಿಳೆ ಒಬ್ಬರು ಆನೆ ಕಾಲು ಅಡಿಗೆ ಸಿಕ್ಕಿ ಮೃತಪಟ್ಟಿದ್ದರು.

What's Your Reaction?

Like Like 0
Dislike Dislike 0
Love Love 6
Funny Funny 1
Angry Angry 0
Sad Sad 22
Wow Wow 0