ಸೋಮವಾರಪೇಟೆ: ಮಳೆಯಿಂದಾಗಿ ಜಲಾವೃತಗೊಂಡ ಮನೆಯವರ ನೆರವಿಗೆ ಬಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಶೌರ್ಯ ತಂಡ

ಸೋಮವಾರಪೇಟೆ: ಮಳೆಯಿಂದಾಗಿ ಜಲಾವೃತಗೊಂಡ ಮನೆಯವರ ನೆರವಿಗೆ ಬಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಶೌರ್ಯ ತಂಡ

ಸೋಮವಾರಪೇಟೆ:- ಜಲಾವೃತಗೊಂಡ ಮನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡ ನೆರವಿಗೆ ಬಂದಿದೆ. ಇಂದು ಸಂಜೆ ಪಟ್ಟಣದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಪಟ್ಟಣದ ಅಲೆಕಟ್ಟೆ ರಸ್ತೆಯ ಕೊಲ್ಲಿಯೊಂದು ಕಟ್ಟಿಕೊಂಡು ನೀರುನುಗ್ಗಿ ನಿಂಗರಾಜು ಎಂಬುವರ ಮನೆ ಜಲಾವೃತಗೊಂಡು ಹಲವಾರು ವಸ್ತುಗಳು ಹಾನಿಗೆ ಒಳಗಾಗಿದೆ.ವಿಷಯ ಅರಿತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ 10ಕ್ಕೂ ಹೆಚ್ಚು ಮಂದಿಯ ತಂಡ ತಕ್ಷಣವೇ ಸ್ಥಳಕ್ಕಾಗಮಿಸಿ ನೀರು ಹೊರಹಾಕಿ ಮನೆ ಶುಚಿತ್ವಗೊಳಿಸಲು ಶ್ರಮಿಸುತ್ತಿದ್ದು,ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಕೃಷ್ಣಮೂರ್ತಿ ಸಂಬಂಧಿಸಿದ ಸಿಬ್ಬಂದಿಯನ್ನು ಸ್ಥಳಕ್ಕೆ ತೆರಳಿ ಅಗತ್ಯಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.