ಹಸು ಕಳವು ಎರಡು ಪ್ರತ್ಯೇಕ ಪ್ರಕರಣ: ನಾಲ್ವರ ಬಂಧನ

Jul 8, 2025 - 17:55
Jul 8, 2025 - 18:03
 0  404
ಹಸು ಕಳವು ಎರಡು ಪ್ರತ್ಯೇಕ ಪ್ರಕರಣ: ನಾಲ್ವರ ಬಂಧನ

ಗೋಣಿಕೊಪ್ಪ:ಜೂನ್ 24ರಂದು ನೋಕ್ಯ ಗ್ರಾಮದ ನಿವಾಸಿಯಾದ ಆನಂದ ಎ.ಎಸ್. ರವರು ಎಸ್ಟೇಟ್‌ನ ಕೊಟ್ಟಿಗೆಯಲ್ಲಿ ಕಟ್ಟಿದ್ದ 02 ಹಸುಗಳನ್ನು ಕಳ್ಳತನ ಮಾಡಿರುವ ಕುರಿತು ಹಾಗೂ ಭದ್ರಗೋಳ ಗ್ರಾಮದ ನಿವಾಸಿ ಪಿ.ಪಿ. ಮುತ್ತಣ್ಣ ರವರು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 01 ಎಮ್ಮೆಯನ್ನು ಕಳ್ಳತನ ಮಾಡಿರುವ ಕುರಿತು ದೂರು ಸ್ವೀಕರಿಸಿದ ಹಿನ್ನಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಎರಡು ಪತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದ್ದು ಎರಡು ಪ್ರಕರಣಗಳ ಆರೋಪಿ ಪತ್ತೆಗಾಗಿ ಮಹೇಶ್ ಕುಮಾರ್.ಎಸ್, ಡಿಎಸ್‌ಪಿ, ವಿರಾಜಪೇಟೆ ಉಪವಿಭಾಗ, ಶ್ರೀ ಶಿವರಾಜ ಆರ್.ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ, ಶ್ರೀ ಪ್ರದೀಪ್ ಕುಮಾ‌ರ್.ಬಿ.ಕೆ. ಪಿಎಸ್‌ಐ, ಗೋಣಿಕೊಪ್ಪ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ, 06-07-2025 ರಂದು ಕೇರಳ ರಾಜ್ಯ ಮತ್ತು ಕಾನೂರು ಪ್ರದೇಶದಲ್ಲಿ ಈ ಕೆಳಕಂಡ 04 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ವಿವರ 1. ಉಬೈದ್.ಕೆ.ಎಂ. 37 ವರ್ಷ, ಚೆನ್ನಯ್ಯನ ಕೋಟೆ ಗ್ರಾಮ, ವಿರಾಜಪೇಟೆ ತಾ. 2. ಗಜನ್ ಗಣಪತಿ, 25 ವರ್ಷ, ಸೀತಾ ಕಾಲೋನಿ, ಪೊನ್ನಂಪೇಟೆ ತಾ.3. ಹನೀಫ ಸಿ.ಈ, 36 ವರ್ಷ, ಬೇಗೂರು ಗ್ರಾಮ, ಪೊನ್ನಂಪೇಟೆ ತಾ||.4. ಅಜನಸ್, 21 ವರ್ಷ, ಮಾನಂದವಾಡಿ, ಕೇರಳ ರಾಜ್ಯ.

ಆರೋಪಿಗಳ ಬಳಿ 7000 ನಗದು ಕೃತ್ಯಕ್ಕೆ ಬಳಸಿದ್ದ ಕೆಎ-45-9927 ರ ಮಹೀಂದ್ರ ಬೊಲೇರೊ ಪಿಕಪ್ ವಾಹನ. ಕೆಎಲ್-12-ಸಿ-3183 ರ ಮಾರುತಿ ಓಮ್ನಿ, ಕೆಎಲ್-20-ಕ್ಯೂ-6784 ರ ಟಾಟಾ ಇಂಟ್ರಾ ವಾಹನ. ಒಂದು ಚಾಕು ಮತ್ತು ಹಗ್ಗ ಹಾಗೂ 3 ಮೊಬೈಲ್ ಪೋನುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ಶ್ರೀ ದಿನೇಶ್ ಕುಮಾರ್.ಬಿ.ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0