ವಿರಾಜಪೇಟೆ: ಕುಡಿತದ ಅಮಲು ಕಾರ್ಮಿಕ ನೇಣಿಗೆ ಶರಣು

ವಿರಾಜಪೇಟೆ: ಕುಡಿತದ ಅಮಲು ಕಾರ್ಮಿಕ ನೇಣಿಗೆ ಶರಣು

ವಿರಾಜಪೇಟೆ:ಕೂಲಿ ಕಾರ್ಮಿಕ ದಂಪತಿಗಳ ಮಧ್ಯೆ ಕಲಹದಿಂದಾಗಿ ಮನನೊಂದ ಪತಿ ನೇಣಿಗೆ ಶರಣಾದ ಘಟನೆ ವಿರಾಜಪೇಟೆ ಸಮೀಪದ ಕದನೂರು ಚಾಮಿಯಾಲ ಗಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕು ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮಿಯಾಲ ಗ್ರಾಮದ ನಿವಾಸಿ ಹನಿಫಾ ಎಂಬುವವರ ತೋಟ ಲೈನ್ ಮನೆಯಲ್ಲಿ ವಾಸವಿದ್ದ ಪಣಿಎರವರ ರಂಜಿತ್ (25) ನೇಣಿಗೆ ಶರಣಾದ ವ್ಯಕ್ತಿ.

 ಘಟನೆಯ ವಿವರ:

ಪಣಿಎರವರ ರಂಜಿತ್ ಮೂಲತ ಪಿರಿಯಪಟ್ಟಣ ನಿವಾಸಿಯಾಗಿದ್ದು ತಂದೆ ತಾಯಿ ಕಳೆದುಕೊಂಡು ಅನಾಥನಾಗಿದ್ದ. ಕೊಡುಗು ಜಿಲ್ಲೆಯ ವಿವಿಧ ತೋಟಗಳಲ್ಲಿ ಕಾರ್ಮಿಕನಾಗಿ ದುಡಿದು ಕಾವ್ಯ ಎಂಬುವ ಯುವತಿಯನ್ನು ಮದುವೆಯಾಗಿದ್ದಾನೆ. ಮದುವೆಯಾಗಿ ಐದು ವರ್ಷ ಕಳೆದು ಕಾರ್ಮಿಕ ದಂಪತಿಗಳಿಗೆ ಎರಡು ಮಕ್ಕಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಚಾಮಿಯಾಲ ಗ್ರಾಮದ ಹನೀಫಾ ಎಂಬುವವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದರು. ಮೃತನಿಗೆ ಮದ್ಯದ ಚಟವಿತ್ತು.ಆಗಸ್ಟ್ 06 ರಂದು ಬುಧವಾರ ಸಂತೆ ದಿನವಾದರಿಂದ ತೋಟದ ಮಾಲೀಕರು ವಾರದ ಮುಂಗಡ ಹಣ ನೀಡಿದ್ದರು ಎನ್ನಲಾಗಿದೆ. ಅಂದು ಸಂತೆ ಮುಗಿಸಿ ಸಂಜೆ ಹೊತ್ತಿಗೆ ಮರಳಿದ ಮೃತ ವ್ಯಕ್ತಿ ಮದ್ಯದ ಬಾಟಲಿಯೋಂದಿಗೆ ಮನೆಗೆ ಹಿಂದುರುಗಿದ್ದಾನೆ. ಊಟವಾದ ಬಳಿಕ ಪತಿ ಮತ್ತು ಪತ್ನಿ ಮಧ್ಯೆ ಕಲಹ ಏರ್ಪಟ್ಟಿದ್ದೆ. ಕಲಹ ಮುಗಿದ ಬಳಿಕ ಬೇರೆ ಬೇರೆ ಕೋಣೆಯಲ್ಲಿ ನಿದ್ರೆಗೆ ಜಾರಿದ್ದಾರೆ.ಗುರುವಾರ ಮುಂಜಾನೆ ಪತ್ನಿ ಕಾವ್ಯ ಪತಿಯ ಕೋಣೆಗೆ ಹೋದ ಸಂಧರ್ಭ ಪತಿ ಪಂಚೆಯಿಂದ ಕೋಣೆಯ ಉತ್ತರದ ಕಬ್ಬಿಣದ ರಾಡ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕಂಡುಬಂದಿದೆ. ತೋಟದ ಮಾಲೀಕರು ವಿರಾಜಪೇಟೆ ಗ್ರಾಮಾಂತರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತನ ಪತ್ನಿ ಕಾವ್ಯ ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೋಲಿಸು ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ವರದಿ: ಕಿಶೋರ್ ಕುಮಾರ್ ಶೆಟ್ಟಿ