ಹಾಕಿ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ಜಾಗ ಪರಿಶೀಲನೆ ನಡೆಸಿದ ಎ.ಎಸ್ ಪೊನ್ನಣ್ಣ

ಹಾಕಿ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ಜಾಗ ಪರಿಶೀಲನೆ ನಡೆಸಿದ ಎ.ಎಸ್ ಪೊನ್ನಣ್ಣ

ವಿರಾಜಪೇಟೆ: ತಾಲೂಕಿನ ವಿ.ಬಾಡಗದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ, ಹಾಕಿ ಕ್ರೀಡಾ ತರಬೇತಿ ಕೇಂದ್ರಕ್ಕೆ, ಲಭ್ಯ ಇರುವ ಸ್ಥಳದ ಪೂರ್ವಭಾವಿ ವೀಕ್ಷಣೆಯನ್ನು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಮಾಡಿದರು. ಈ ಯೋಜನೆಯ ಶೀಘ್ರ ಹಾಗೂ ಯಶಸ್ವಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಂದು ಸ್ಥಳಕ್ಕೆ ತಿರುಳಿದ ಶಾಸಕರು ಪರಿಶೀಲನೆ ನಡೆಸಿದರು. ಕ್ರೀಡಾ ತರಬೇತಿ ಕೇಂದ್ರಕ್ಕೆ ಜಾಗ ಕಾಯ್ದಿರಿಸುವ ಸಂಬಂದ, ಸ್ಥಳ ಪರಿಶೀಲನೆ ನಡೆಸಲಾಗಿ ಕಾಲಿ ಇರುವ ಸುಮಾರು 11 ಎಕ್ರೆಯಷ್ಟು ಸರಕಾರಿ ಜಾಗವನ್ನು, ಕೂಡಲೇ ಪರಿಗಣಿಸಿ, ತಹಶೀಲ್ದಾರ್ ಒಂದು ವಾರದೊಳಗೆ ಸರ್ವೆ ನಕ್ಷೆ ನೀಡುವಂತೆ ಸರ್ವೆ ಇಲಾಖೆಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಕಂಜಿತಂಡ ಗಿಣಿ ಮೊಣ್ಣಪ್ಪ, ಕಂಜಿತಂಡ ರಘು ಮಾಚಯ್ಯ, ಕಂಜಿತಂಡ ಪೂವಣ್ಣ, ಕೊಂಗಂಡ ಕಾಶಿ ಕಾರ್ಯಪ್ಪ, ಚೇಮಿರ ಪ್ರಕಾಶ್, ವಿರಾಜಪೇಟೆ ತಹಸೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.