ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಯಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ

ವಿರಾಜಪೇಟೆ: ತಾಲ್ಲೂಕಿನ ಅನ್ವಾರುಲ್ ಹುದಾ ಪಬ್ಲಿಕ್ ಶಾಲೆ, ವಿರಾಜಪೇಟೆ ಯಲ್ಲಿ ಶನಿವಾರ, “ಸಂತಸ ಶಿಕ್ಷಣ – ಸಂಭ್ರಮ ಕಾರ್ಯಕ್ರಮದ ಅಂಗವಾಗಿ “ಮಾದಕ ವಸ್ತುಗಳ ದುರುಪಯೋಗ ಮತ್ತು ತಡೆಗಟ್ಟುವಿಕೆ” ಎಂಬ ವಿಷಯದಡಿ ವಿದ್ಯಾರ್ಥಿಗಳಲ್ಲಿ ನಾಗರಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿರಾಜಪೇಟೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರಮೋದ್ ಎಚ್.ಎಸ್., ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರ್, ಹಾಗೂ ಕಾನ್ಸ್‌ಟೇಬಲ್‌ರಾದ ಪ್ರಿಯಾಂಕಾ ಮತ್ತು ಶಿವಶರಣ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುರ್ಬಳಕೆ, ಅದರ ದುಷ್ಪರಿಣಾಮಗಳು ಹಾಗೂ ತಡೆಯುವ ಮಾರ್ಗಗಳನ್ನು ವಿವರಿಸಿದರು. ನಶೆ ಪದಾರ್ಥಗಳಿಂದ ದೂರವಿರುವ ಮಹತ್ವವನ್ನು ಉತ್ತಮ ಜೀವನಶೈಲಿಯ ಕುರಿತು ಸ್ಪಷ್ಟ ಸಂದೇಶವನ್ನು ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಹಸ್ಸೈನರ್ ಸ್ವಾಗತ ಭಾಷಣವನ್ನೂ, ಶಿಕ್ಷಕರಾದ ಯಾಕೂಬ್ ಮಾಸ್ಟರ್ ವಂದನಾರ್ಪಣೆಯನ್ನೂ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಚರ್ಚೆ ಮತ್ತು ಪ್ರಶ್ನೋತ್ತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.