ಹಾರಂಗಿ: ಕಟ್ಟು ಪದ್ಧತಿಯಲ್ಲಿ ಖಾರೀಫ್ ಬೆಳೆಗೆ ನೀರು

ಮಡಿಕೇರಿ -ಹಾರಂಗಿ ಯೋಜನೆಯಡಿಯಲ್ಲಿ 2025 ರ ಖಾರೀಫ್ ಬೆಳೆಗಳಿಗೆ ನಾಲೆಗಳಲ್ಲಿ ನೀರು ಹರಿಸುವ ಸಂಬಂಧ ಗುರುವಾರ ವ್ಯವಸ್ಥಾಪಕ ನಿರ್ದೇಶಕರು, ಕಾನೀನಿನಿ., ಬೆಂಗಳೂರು ರವರ ಕಚೇರಿ ಸಭಾಂಗಣದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಹಾಗೂ ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಸಚಿವರು, ವಿಧಾನಸಭಾ ಶಾಸಕರು, ಅಧಿಕಾರಿ ಸದಸ್ಯರು ಮತ್ತು ಅಧಿಕಾರೇತರ ಸದಸ್ಯರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ಚರ್ಚಿಸಿ ಕೈಗೊಂಡ ತೀರ್ಮಾನದಂತೆ ಪ್ರಕಟಣೆ ಹೊರಡಿಸಲಾಗಿದೆ.
ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ ಇರುವ ನೀರಿನ ಸಂಗ್ರಹಣೆ ಮತ್ತು ಜುಲೈ 2025 ರಿಂದ ಡಿಸೆಂಬರ್ 2025 ರ ವರೆಗೆ ಬರುಬಹುದಾದ ಕಳೆದ 20 ವರ್ಷಗಳ ಕನಿಷ್ಠ ಒಳಹರಿವಿನ ಪ್ರಮಾಣವನ್ನು ಆಧರಿಸಿ, ನಿರೀಕ್ಷಿತ ಒಳಹರಿವಿನ ಪರಿಮಾಣವನ್ನು ಪರಿಗಣಿಸಿ ದಿನಾಂಕ: 17/07/2025 ರಿಂದ 01/08/2025 ರವರೆಗೆ (15 ದಿನಗಳು) ಅಚ್ಚುಕಟ್ಟು ವ್ಯಾಪ್ತಿಯ ಜನಜನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆ-ಕಟ್ಟೆಗಳಿಗೆ ನೀರನ್ನು ಹರಿಸಲಾಗುವುದು. ತದನಂತರ ದಿನಾಂಕ 02/08/2025 ರಿಂದ 14/12/2025 ರವರೆಗೆ ಕೆಳಕಂಡ ವೇಳಾಪಟ್ಟಿಯಂತೆ ಕಟ್ಟು ನೀರಿನ ಪದ್ಧತಿಯ ಆಧಾರದಲ್ಲಿ ಖಾರೀಫ್ 2025 ರ ಬೆಳೆಗಳಿಗಾಗಿ ನಾಲೆಗಳಲ್ಲಿ ನೀರನ್ನು ಹರಿಸಲಾಗುವುದು. ಹಾರಂಗಿ ಜಲಾಶಯದ ನಾಲೆಗಳಲ್ಲಿ ನೀರು ಹರಿಸುವ ದಿನಾಂಕ ಮತ್ತು ಅವಧಿ: 2025 ರ ಜುಲೈ, 17 ರಿಂದ ಡಿಸೆಂಬರ್, 14 ರವರೆಗೆ (ಜುಲೈ, 17 ರಿಂದ ಆಗಸ್ಟ್, 16 ರವರೆಗೆ 30 ದಿನಗಳು, ಆಗಸ್ಟ್, 17 ರಿಂದ 31 ರವರೆಗೆ 15 ದಿನಗಳು, ಸೆಪ್ಟೆಂಬರ್, 01 ರಿಂದ ಸೆಪ್ಟೆಂಬರ್, 15 ರವರೆಗೆ 15 ದಿನಗಳು, ಸೆಪ್ಟೆಂಬರ್, 16 ರಿಂದ 30 ರವರೆಗೆ 15 ದಿನಗಳು, ಅಕ್ಟೋಬರ್, 01 ರಿಂದ 15 ರವರೆಗೆ 15 ದಿನಗಳು, ಅಕ್ಟೋಬರ್, 16 ರಿಂದ 30 ರವರೆಗೆ, ಅಕ್ಟೋಬರ್, 31 ರಿಂದ ನವೆಂಬರ್, 14 ರವರೆಗೆ, ನವೆಂಬರ್, 15 ರಿಂದ 29 ರವರೆಗೆ, ನವೆಂಬರ್, 30 ರಇಂದ ಡಿಸೆಂಬರ್, 14 ರವರೆಗೆ 15 ದಿನಗಳು). ಖಾರೀಫ್ 2025 ಬೆಳೆಗಳಿಗೆ ನೀರು ಹರಿಸುವ
ಅಚ್ಚುಕಟ್ಟು ಪ್ರದೇಶದ ವಿವರಗಳು:
ಹಾರಂಗಿ ಬಲದಂಡೆ ನಾಲೆ 0.00 ಯಿಂದ 21.175 ಕಿ.ಮೀ.ವರೆಗೆ ಭತ್ತ ವಿತರಣಾ ನಾಲೆ 1 ರಿಂದ 10 ರವರೆಗೆ , 21.75 ರಿಂದ 138.40 ಕಿ.ಮೀ. ಅರೆ ನೀರಾವರಿ (ವಿತರಣಾ ಸಂ.1 ರಿಂದ 98) ಭತ್ತ 7632 ಎಕರೆ, ಅರೆ ನೀರಾವರಿ 59,700 ಎಕರೆ ಒಟ್ಟು 67,332 ಎಕರೆ. ಹಾರಂಗಿ ಎಡದಂಡೆ ನಾಲೆ 0.00 ಯಿಂದ 54.94 ಕಿ.,ಮೀ. ವರೆಗೆ ಭತ್ತ, ವಿತರಣಾ ನಾಲೆ 1 ರಿಂದ 29 ರವರೆಗೆ, 54.94 ಕಿ.ಮೀ.ನಿಂದ 153.00 ವರೆಗೆ ಅರೆ ನೀರಾವರಿ (ವಿತರಣಾ ನಾಲೆ 30 ರಿಂದ 90 ರವರೆಗೆ) ಭತ್ತ 7935 ಎಕರೆ, ಅರೆ ನೀರಾವರಿ 25,528 ಎಕರೆ ಒಟ್ಟು 33,463 ಎಕರೆ. ಸೋಮವಾರಪೇಟೆ ಏತ ನೀರಾವರಿ ಯೋಜನೆ ಭತ್ತ 1500 ಎಕರೆ ಒಟ್ಟು 1500 ಎಕರೆ. ಪಿರಿಯಾಪಟ್ಟಣ ಏತ ನೀರಾವರಿ ಯೋಜನೆ 0.00 ರಿಂದ 50 ಕಿ.ಮೀ.ವರೆಗೆ 1 ರಿಂದ 38 ವಿತರಣಾ ನಾಲೆಗಳು ಅರೆ ನೀರಾವರಿ 30,000 ಎಕರೆ ಒಟ್ಟು 30,000 ಎಕರೆ. ಒಟ್ಟು ಭತ್ತ 17,067 ಎಕರೆ, ಅರೆ ನೀರಾವರಿ 1,15,228, ಸಣ್ಣ ನೀರಾವರಿ ಕೆರೆಗಳು 2,600 ಎಕರೆ ಒಟ್ಟು 1,34,895 ಎಕರೆ ಜಲಾಶಯಕ್ಕೆ ಒಳಹರಿವು ಕ್ಷೀಣಿಸಿದ್ದಲ್ಲಿ ನೀರು ಬಿಡುವ ಮೇಲ್ಕಂಡ ವೇಳಾ ಪಟ್ಟಿಯು ಪರಿಷ್ಕರಣೆಗೆ ಒಳಪಟ್ಟಿದ್ದು, ಈ ಸಂಬಂಧ ಉಂಟಾಗಬಹುದಾದ ಬೆಳೆಹಾನಿಗೆ ಕಾವೇರಿ ನೀರಾವರಿ ನಿಗಮವು ಜವಾಬ್ದಾರರಾಗುವುದಿಲ್ಲ್ಲ. ಹಾರಂಗಿ ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟುದಾರರು ನೀರಾವರಿ ಅಧಿಕಾರಿಗಳೊಡನೆ ಸಹಕರಿಸಿ ನಾಲೆಯ ನೀರಿನ ಅವಲಂಬಿತ ಧೀರ್ಘಾವಧಿ ಬೆಳೆಗಳನ್ನು ಬೆಳೆಯದೆ, ಮಳೆ ಅವಲಂಬಿತ ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯಲು ಸೂಚಿಸಲಾಗಿದೆ. ಒಂದು ವೇಳೆ ಪ್ರಕಟಣೆ ಉಲ್ಲಂಘಿಸಿ ದೀರ್ಘಾವಧಿ ಬೆಳೆಗಳನ್ನು ಬೆಳೆದಲ್ಲಿ ನೀರು ಹರಿಸುವುದರ ವಿಷಯವಾಗಿ ಕಾವೇರಿ ನೀರಾವರಿ ನಿಗಮವು ಯಾವುದೇ ರೀತಿಯಲ್ಲಿಯೂ ಜವಾಬ್ದಾರರಲ್ಲವೆಂದು ಪ್ರಕಟಿಸಲಾಗಿದೆ ಎಂದು ಕುಶಾಲನಗರ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಹಾಗೂ ಹಾರಂಗಿ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸತೀಶ ಅವರು ತಿಳಿಸಿದ್ದಾರೆ.