ಕರಡಿಗೋಡು: ಕಾವೇರಿ ನದಿ ಪ್ರವಾಹದಿಂದ ಹೊಳೆಕೆರೆ ರಸ್ತೆ ಸಂಪರ್ಕ ಕಡಿತ

ಕರಡಿಗೋಡು: ಕಾವೇರಿ ನದಿ ಪ್ರವಾಹದಿಂದ ಹೊಳೆಕೆರೆ ರಸ್ತೆ   ಸಂಪರ್ಕ ಕಡಿತ

ಸಿದ್ದಾಪುರ:ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆ ರಸ್ತೆ ಕಾವೇರಿ ನದಿ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದು, ಅಂದಾಜು ರಸ್ತೆಯಲ್ಲಿ 4 ಅಡಿ ನೀರು ಇರುತ್ತದೆ. ಬದಲಿ ರಸ್ತೆ ವ್ಯವಸ್ಥೆ ಇರುತ್ತದೆ.ಈ ಬಗ್ಗೆ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಅಪಾಯದ ಸ್ಥಳಗಳಿಗೆ ತೆರಳದಂತೆ ಹಾಗೂ ಆ ಭಾಗದ ಜನರಿಗೆ ಕಾಳಜಿ ಕೇಂದ್ರಕ್ಕೆ ಬರಲು ಸೂಚಿಸಿದರು.ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.