ಕೊಡ್ಲಿಪೇಟೆ:ಎಸ್‌ಕೆಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಸತ್ ಚುನಾವಣೆ

ಕೊಡ್ಲಿಪೇಟೆ:ಎಸ್‌ಕೆಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳ  ಸಂಸತ್ ಚುನಾವಣೆ

ಕೊಡ್ಲಿಪೇಟೆ: ಸಮೀಪದ ಕಲ್ಲುಮಠ ಎಸ್.ಕೆ.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಸಂಸತ್ ಚುನಾವಣೆ ನಡೆಯಿತು. ಕೇಂದ್ರ ಮತ್ತು ರಾಜ್ಯಗಳಿಗೆ ನಡೆಯುವ ಸಾರ್ವಜನಿಕ ಮಾದರಿಯ ಚುನಾವಣಾ ನಿಯಮಾನುಸಾರ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕನ್ನು ಚಲಾಯಿಸುವ ಬಗ್ಗೆ ಅರಿವು ಮೂಡಿಸುವ ರೀತಿಯಲ್ಲಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಎಲೆಕ್ಟ್ರಾನಿಕ್ ಯಂತ್ರವಾಗಿ ಮೊಬೈಲ್ ನಲ್ಲಿ ಇವಿಎಂ ಆ್ಯಪ್ ಮೂಲಕ ಗೌಪ್ಯವಾಗಿ ಮತ ಚಲಾವಣೆ ಮಾಡಿದರು.

ಚುನಾವಣಾ ಅಧಿಕಾರಿಯಾಗಿ ಶಾಲಾ ಮುಖ್ಯೋಪಾಧ್ಯಾಯ ಅಭಿಲಾಶ್ ಹೆಚ್. ಎಂ., ಸಹಾಯಕಾಧಿಕಾರಿಯಾಗಿ ಧನಲಕ್ಷ್ಮಿ ಕೆ.ಎಸ್,ಆರಕ್ಷಕ ಅಧಿಕಾರಿಗಳಾಗಿ 10ನೇ ತರಗತಿಯ ವಂಶಿತ್, ಸುಜನ್ ಮತ್ತು ಯಶಸ್ ಗೌಡ ಸೇರಿದಂತೆ, ಸಹಾಯಕ ಚುನಾವಣಾ ಸಿಬ್ಬಂದಿಗಳಾಗಿ ಶಾಲೆಯ ಸಹ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು.

ಮುಖ್ಯಮಂತ್ರಿಯಾಗಿ ವಿಕಾಸ್ ಕೆ. ಎ.,ಉಪಮುಖ್ಯಮಂತ್ರಿಯಾಗಿ ತನ್ಮಯ್ ಎಂ.ಎಂ., ಕಾರ್ಯದರ್ಶಿ ತನ್ಮಯಿ ಎ. ವೈ., ಕ್ರೀಡಾ ಸಚಿವ ಸಾನ್ವಿ ಕೆ. ಕೆ, ಉಪ ಕ್ರೀಡಾ ಸಚಿವನಾಗಿ ಮಿಥುನ್ ಆಹಾರ ಸಚಿವ ಪ್ರೀತಂ ಗೌಡ ಕೆ.ಎಮ್, ಉಪಹಾರ ಸಚಿವ ದುಷ್ಯಂತ್ ಗೌಡ ಹೆಚ್.ವಿ , ಆರೋಗ್ಯ ಸಚಿವ ಕುಲದೀಪ್ ಗೌಡ ಹೆಚ್ಚ.ಸಿ, ಉಪ ಆರೋಗ್ಯ ಸಚಿವ ಸಮೃದ್ ವೈ.ಪಿ, ಕೃಷಿ ಮತ್ತು ತೋಟಗಾರಿಕೆ ಸಚಿವೆಯಾಗಿ ಬೆನಕ ಬಿ.ಎಸ್, ಸಾಂಸ್ಕೃತಿಕ ಸಚಿವೆ ಮೊಹಂಕ ಎನ್.ಎಂ, ಉಪಸಾಂಸ್ಕೃತಿಕ ಸಚಿವೆ ಧ್ಯಾನವಿ ಕೆ.ಎಂ., ಮತ್ತು ಹಣಕಾಸಿನ ಸಚಿವರಾಗಿ ಮಹಮದ್ ಕಲಂದರ್ ಚುನಾವಣೆ ಮೂಲಕ ಆಯ್ಕೆಗೊಂಡರು.

 ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರು ಕಲ್ಲುನಠದ ಪೀಠಾಧಿಪತಿ ಶ್ರೀ ಮಹಾಂತ ಸ್ವಾಮಿಯವರು ಶಾಲಾ ಚುನಾವಣೆ ನಡೆಯುವಾಗ ಹಾಜರಿದ್ದು, ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಶುಭಹಾರೈಸಿದರು.ಚುನಾವಣಾ ಪ್ರಕ್ರಿಯೆಯಲ್ಲಿ ಶಾಲೆಯ ಶಿಕ್ಷಕರು ,ಸಿಬ್ಬಂದಿಗಳು ಭಾಗವಹಿಸಿದರದ್ದರು.