ಮಡಿಕೇರಿ ನಗರಸಭಾ ಸದಸ್ಯ ಅಪ್ಪಣ್ಣ ಸದಸ್ಯತ್ವ ಅರ್ಜಿ ವಿಚಾರಣೆ: ಜಿಲ್ಲಾಧಿಕಾರಿ ಆದೇಶ ಪುನರ್ ಪರಿಶೀಲನೆ ‌ನಡೆಸಲು ಆದೇಶ ನಗರಸಭಾ ಸದಸ್ಯ ಅಮೀನ್ ಮೊಹಸ್ಸಿನ್ ಮಾಹಿತಿ

ಮಡಿಕೇರಿ ನಗರಸಭಾ ಸದಸ್ಯ ಅಪ್ಪಣ್ಣ ಸದಸ್ಯತ್ವ ಅರ್ಜಿ ವಿಚಾರಣೆ:  ಜಿಲ್ಲಾಧಿಕಾರಿ ಆದೇಶ ಪುನರ್ ಪರಿಶೀಲನೆ ‌ನಡೆಸಲು ಆದೇಶ  ನಗರಸಭಾ ಸದಸ್ಯ ಅಮೀನ್ ಮೊಹಸ್ಸಿನ್ ಮಾಹಿತಿ

ಮಡಿಕೇರಿ: ‌ನಗರಸಭಾ ಸದಸ್ಯ, ಕೆ.ಎಂ‌ ಅಪ್ಪಣ್ಣ ಅವರು, ಅಕ್ರಮ ಹಣ ವರ್ಗಾವಣೆ ಹಾಗೂ ಒಂದೇ ಬಿಲ್ಲಿಗೆ ಎರಡು ಬಾರಿ ಹಣ ಪಾವತಿಸಿಕೊಂಡಿರುವ ಬಗ್ಗೆ ನಗರದ ಸಭಾ ಸದಸ್ಯರಾದ ಅಮೀನ್ ಮುಹಸ್ಸೀನ್ ಅವರಿಂದ ಮಾನ್ಯ ಪ್ರಾದೇಶಿಕ ಆಯುಕ್ತರು ಮೈಸೂರು ವಿಭಾಗ ಮೈಸೂರು ಇವರ ಗಣನ್ಯಾಯಾಲಯದಲ್ಲಿ ಅಪ್ಪಣ್ಣನವರ ಸದಸ್ಯತ್ವ ರದ್ದುಗೊಳಿಸುವಂತೆ ಅರ್ಜಿ ಹಾಕಲಾಗಿತ್ತು. ಅರ್ಜಿಯ ಮೇಲೆ ಆದೇಶ ಹೊರಡಿಸಲಾಗಿದೆ. ಜಿಲ್ಲಾಧಿಕಾರಿಯವರು ಕೌನ್ಸಿಲ್ ಸಭೆಯ ಶಿಫಾರಸ್ಸು ಇಲ್ಲದಿರುವ ಕಾರಣ ಸೆಕ್ಷನ್ 41(1) ರ ಪ್ರಕಾರ ಸದಸ್ಯತ್ವ ರದ್ದುಗೊಳಿಸಲು ಸಾಧ್ಯವಿಲ್ಲ ಎಂಬುವ ಈ ಹಿಂದೆ ಹೊರಡಿಸಿದ ಆದೇಶವು ತಪ್ಪಾಗಿರುತ್ತದೆ ಹಾಗೂ ವಿಚಾರ ನಡೆಸಿ ಸೂಕ್ತ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗಳು ಮಡಿಕೇರಿ ಅವರಿಗೆ ಆದೇಶಿಸಿದ್ದಾರೆ.

ಕೆ. ಎಂ. ಅಪ್ಪಣ್ಣ ಅವರ ಮಾಲೀಕತ್ವದ ಪ್ಲಾಂಟರ್ಸ್ ವರ್ಲ್ಡ್ ಸಂಸ್ಥೆಗೆ ಒಂದೇ ಬಿಲ್ಲಿಗೆ ಎರಡು ಬಾರಿ ಪಾವತಿ ಮಾಡಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಸಿವಿಲ್ ಸೇವಾ ನಿಯಮಗಳು 1957ರ ನಿಯಮ 8(iii) ರಂತೆ ಕ್ರಮ ಜರಿಗೆಸಲು ಉಪವಿಭಾಗಾಧಿಕಾರಿ ವಿಚಾರನ ವರದಿಯನ್ನು ಮಾನ್ಯ ಜಿಲ್ಲಾಧಿಕಾರಿಯವರಿಗೆ ಕಳುಸಿದ್ದಾರೆ.