ಶಾಸಕ ಪೊನ್ನಣ್ಣ ಹುಟ್ಟು ಹಬ್ಬಾಚರಣೆ: ಸಿದ್ದಾಪುರದಲ್ಲಿ ಸ್ವೆಟರ್, ಔಷಧಿ ಕಿಟ್, ಸ್ಮಾರ್ಟ್ ಟಿವಿ ವಿತರಣೆ

ಶಾಸಕ ಪೊನ್ನಣ್ಣ ಹುಟ್ಟು ಹಬ್ಬಾಚರಣೆ:   ಸಿದ್ದಾಪುರದಲ್ಲಿ ಸ್ವೆಟರ್, ಔಷಧಿ ಕಿಟ್, ಸ್ಮಾರ್ಟ್ ಟಿವಿ ವಿತರಣೆ

ಮಡಿಕೇರಿ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸಿದ್ದಾಪುರದ ಅನಾಥಾಶ್ರಮ ವಿದ್ಯಾರ್ಥಿಗಳಿಗೆ ಸ್ವೇಟರ್, ಫ್ರೀ ಕೆಜಿ ಮಕ್ಕಳಿಗೆ ಸ್ಮಾರ್ಟ್ ಟಿವಿ ಕೊಡುಗೆ ಹಾಗೂ ಡಯಾಲಿಸಿಸ್ ಸಂತ್ರಸ್ತರಿಗೆ ಒಂದು ತಿಂಗಳ ಔಷಧಿ ಕಿಟ್ ಗಳನ್ನ ವಿತರಿಸಿ ನೆರವಾಗಿದ್ದಾರೆ.

 ಹುಟ್ಟು ಹಬ್ಬದ ಅಂಗವಾಗಿ ಸಿದ್ದಾಪುರ ಮದರಸ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಸ್ವೆಟ್ಟರ್ ಪುಟಾಣಿ ವಿದ್ಯಾರ್ಥಿಗಳ ಕಲಿಕೆಗೆ ಅವಶ್ಯಕತೆ ಇರುವ ಸ್ಮಾರ್ಟ್ ಟಿವಿ, ಡೈಲಿಸಸ್ ತಂತ್ರಸ್ಥರಿಗೆ ಒಂದು ತಿಂಗಳ ಔಷಧಿ ಕಿಟ್ ಗಳನ್ನ ವಿತರಿಸಿದರು.

 ಈ ಸಂದರ್ಭ ಮಾತನಾಡಿ ಶಾಸಕ ಎ.ಎಸ್ ಪೊನ್ನಣ್ಣ ಅಲ್ಪಸಂಖ್ಯಾತ ಘಟಕ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಸಮುದಾಯ ಬಾಂಧವರು ಸರ್ಕಾರದ ಎಲ್ಲಾ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಹೇಳಿದ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರ ಹಲವಾರು ಯೋಜನೆಗಳನ್ನು ನೀಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

 ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಅನಿಫ್ ಮಾತನಾಡಿ ಶಾಸಕರು ಅಲ್ಪ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಸಮಾಜ ಬಾಂಧವರಿಗೆ ಸರ್ಕಾರದ ಯೋಜನೆಗಳನ್ನು ಸಮಾನವಾಗಿ ನೀಡುವುದರ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಇಬ್ಬರು ಶಾಸಕರು ಕೈಜೋಡಿಸಿದ್ದಾರೆ.ಅಲ್ಪಸಂಖ್ಯಾತ ಸಮುದಾಯ ಬಾಂಧವರು ಹಲವಾರು ಸರ್ಕಾರದ ಯೋಜನೆಗಳಿದ್ದು ಇದರ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಯೊಂದಿಗೆ ಮುಂದೆ ಬರಬೇಕೆಂದರು.

 ಪೊನ್ನಂಪೇಟೆ ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಕೋಳುಮಂಡ ರಫೀಕ್ ಮಾತನಾಡಿ ಶಾಸಕ ಪೊಣ್ಣನವರು ಕ್ಷೇತ್ರದ ಜನರ ವಿಶ್ವಾಸ ಗಳಿಸಿ ಹಿಂದೆಂದೂ ಕಾಣದಂತ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಲ್ಲಾ ಬಾಂಧವರನ್ನ ಸಮಾನವಾಗಿ ಕಾಣುವುದರ ಮೂಲಕ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಪಣತೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.

 ಈ ಸಂದರ್ಭ ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಪಿ.ಸಿ ಹಸೈನಾರ್ ಹಾಜಿ, ಅಕ್ರಮ ಸಕ್ರಮ ಸಮಿತಿ ವಿರಾಜಪೇಟೆ ತಾಲ್ಲೂಕು ಆರ್ ಕೆ ಅಬ್ದುಲ್ ಸಲಾಂ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಎಂ ಸೈಯದ್ ಬಾವ, ಸಿದ್ದಾಪುರ ಮುಸ್ಲಿಂ ಜಮಾಆತ್ ಅಧ್ಯಕ್ಷ ಯು ಎಂ ಮುಸ್ತಫ ಹಾಜಿ, ಡಿ ಸಿ ಸಿ ಸದಸ್ಯ ಕೆ ಯು ಮಜೀದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು