ಎಸ್ಎಂ.ಎಸ್ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಂಸತ್ ಚುನಾವಣೆ

ಎಸ್ಎಂ.ಎಸ್ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಂಸತ್ ಚುನಾವಣೆ

ಕಡಂಗ: ವಿರಾಜಪೇಟೆ ತಾಲೂಕಿನ ಅರಮೇರಿ ಗ್ರಾಮದ ಎಸ್.ಎಂ.ಎಸ್ ಅಕಾಡೆಮಿಯಲ್ಲಿ2025-26 ರ ಶೈಕ್ಷಣಿಕ ವರ್ಷದ ಶಾಲಾ ನಾಯಕಿ ಹಾಗೂ ಉಪನಾಯಕಿ ಸ್ಥಾನಕ್ಕೆ ಶಾಲಾ ಸಂಸತ್  ಲಚುನಾವಣೆಯನ್ನು ಶಾಲಾ ಪ್ರಾಂಶುಪಾಲರಾದ ಕುಸುಮ್ ಟಿಟೋ ಹಾಗೂ ಚುನಾವಣಾ ಸಾಕ್ಷಾರತ ಕ್ಲಬ್ ನ ಪದಾಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ನಡೆಯಿತು.3ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ಮತವನ್ನು ಚಲಾಯಿಸಿದರು. ದಿನದ ಕೊನೆಯಲ್ಲಿ ಚುನಾವಣಾ ಸಾಕ್ಷಾರತ ಕ್ಲಬ್ ನ ಸರ್ವ ಸದಸ್ಯರ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ವನ್ನು ನಡೆಸುವುದರ ಮೂಲಕ ಶಾಲಾ ನಾಯಕಿ ಸ್ಥಾನಕ್ಕೆ ಕಟ್ಟೇರ ತನಿಶ್ ಪೂಣಚ್ಚ, ಹಾಗೂ ಉಪನಾಯಕಿ ಸ್ಥಾನಕ್ಕೆ ದೇಷ್ಣ ದೇಚಮ್ಮ ಎಂ.ಯು. ಆಯ್ಕೆಯಾದರು.

ವರದಿ:ನೌಫಲ್