ಸಿದ್ದಾಪುರ: ಕಾರ್ಮಿಕರ ಮೇಲೆ ಕಾಡಾನೆ ದಾಳಿ; ದಾಳಿ ಮಾಡಿದ ಕಾಡಾನೆಯನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿಗಳು

ಸಿದ್ದಾಪುರ: ಕಾರ್ಮಿಕರ ಮೇಲೆ ಕಾಡಾನೆ ದಾಳಿ;   ದಾಳಿ ಮಾಡಿದ ಕಾಡಾನೆಯನ್ನು ಕಾಡಿಗಟ್ಟಿದ  ಅರಣ್ಯ ಇಲಾಖೆ ಸಿಬ್ಬಂದಿಗಳು
ಫೋಟೋ: ಕಾಡಾನೆ‌ ದಾಳಿಯಿಂದ ಗಾಯಗೊಂಡ ಕಾರ್ಮಿಕರು

ಸಿದ್ದಾಪುರ :- ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರಿಬ್ಬರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಓರ್ವ ಕಾರ್ಮಿಕ ಗಂಭೀರ ಗಾಯಗಳಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾದರೆ ಮತ್ತೋರ್ವ ಕಾರ್ಮಿಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರದ ಘಟನೆ ಸಿದ್ದಾಪುರ ಸಮೀಪದ ಶಿಲ್ಪಿ ಕಾಫಿ ತೋಟದಲ್ಲಿ ನಡೆದಿದೆ.

 ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರಿಬ್ಬರೂ ಕಾಫಿ ತೋಟದ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ಸಂದರ್ಭ ಅಠಾತ್ತನೆ ಬಂದ ಕಾಡಾನೆಯೊಂದು ಬಾಗಲಕೋಟೆ ಮೂಲದ ಪ್ರವೀಣ್ ಪರಮಾನಂದ ಎಂಬ ಕಾರ್ಮಿಕನ ಮೇಲೆ ದಾಳಿ ಮಾಡಿದೆ. ಸ್ಥಳದಲ್ಲಿದ್ದ ಮತ್ತೋರ್ವ ಕಾರ್ಮಿಕ ರಘು ಎಂಬಾತನ ಮೇಲೆ ದಾಳಿಗೆ ಯತ್ನಿಸಿದ ಸಂದರ್ಭ ಓಡಿಬಿದ್ದು ಪ್ರಾಣ ಪಾಯದಿಂದ ಪಾರಾಗಿದ್ದಾರೆ. ಸಮೀಪದಲ್ಲಿದ್ದ ಇತರ ಕಾರ್ಮಿಕರನ್ನು ಕಂಡ ಕಾಡಾನೆ ದಾಳಿಗೆ ಯತ್ನಿಸಿದ ಸಂದರ್ಭ ಕೆಲವು ಕಾರ್ಮಿಕರು ಓಡಿ ಪಾರಾಗಿದ್ದಾರೆ. ತಕ್ಷಣ ತೋಟದ ಮಾಲೀಕರು ಇಬ್ಬರು ಕಾರ್ಮಿಕರನ್ನು ಸಿದ್ದಾಪುರ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆಗೆ ದಾಖಲಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ವಲಯ ಅರಣಾಧಿಕಾರಿ ಶಿವರಾಮ್ ಗಾಯಾಳುಗಳ ಆರೋಗ್ಯ ವಿಚಾರಿಸಿ ಗಂಭೀರ ಗಾಯಗೊಂಡಿದ್ದ ಪ್ರವೀಣ್ ಎಂಬ ಕಾರ್ಮಿಕ ನನ್ನ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಡಿಎಫ್ಓ ಜಗನ್ನಾಥ್, ಎಸಿಎಫ್ ಗೋಪಾಲ್, ಆರ್‌ಎಫ್ಒ ಶಿವರಾಂ ಸೇರಿದಂತೆ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರಿಗೆ ಉಪಟಳ ನೀಡುತ್ತಿದ್ದ ಕಾಡಾನೆಯನ್ನ ಕಾಡಿಗಟ್ಟಲು ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ಕಾರ್ಯಚರಣೆ ಮುಂದುವರಿಸಿದ ಸಿಬ್ಬಂದಿಗಳು ಒಂಟಿ ಸಲಗವನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ..