ಸಿದ್ದಾಪುರ: ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ "ಅಕ್ಕ ಕೆಫೆ" ಕಾಮಗಾರಿ ಪರಿಶೀಲನೆ

ಸಿದ್ದಾಪುರ: ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ "ಅಕ್ಕ ಕೆಫೆ"  ಕಾಮಗಾರಿ ಪರಿಶೀಲನೆ

ಸಿದ್ದಾಪುರ:- ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ ರಾಜ್ಯದಾದ್ಯಂತ ಪ್ರಾರಂಭಿಸಲಾಗುತ್ತಿರುವ ಅಕ್ಕ‌ಕೆಫೆ ಕಾಮಗಾರಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ ಪರಿಶೀಲನೆ ನಡೆಸಿದರು.ನಂತರ ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಪ್ರಧಾನಿ ಮಂತ್ರಿ ವನ್ ಧನ್ ವನಸಿರಿ ಯೋಜನೆಯಡಿಯಲ್ಲಿ ಬುಡಕಟ್ಟು ಜನಾಂಗದವರಿಗೆ ಜೇನು ಪೆಟ್ಟಿಗೆ ವಿತರಣೆ ಸೇರಿದಂತೆ ಸಂಘಟನೆ ಕಾರ್ಯ ಕ್ರಮಗಳ ಬಗೆ ವಿವರವನ್ನು ಪಡೆದುಕೊಂಡ ಅವರು ಇಲ್ಲಿನ ಸಂಜೀವಿನಿ ಒಕ್ಕೂಟವು ಜಿಲ್ಲೆಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ

ರಾಜ್ಯ ಸರ್ಕಾರದಿಂದ ಕೊಡಲ್ಪಡುವ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕ ಟಿ.ಎನ್ ಜೀವನ್ ಕುಮಾರ್ , ತಾಲೂಕು ಕಾರ್ಯ ನಿವಾಹಣಾಧಿಕಾರಿ ಅಪ್ಪಣ್ಣ,ಸಹಾಯಕ ನಿರ್ದೇಶಕರು ಶ್ರೀನಿವಾಸ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಕುಮಾರ್ ,ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ, ತಾಲೂಕು ಮೇಲ್ವಿಚಾರಕ ಸೋಮಶೇಖರ್ ತಾಲೂಕು ವ್ಯವಸ್ಥಾಪಕರಾದ ಧನ್ಯ,ಮತ್ತು ಮಂಜು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಸಿದ್ದಾಪುರ ವಲಯ ಅಧ್ಯಕ್ಷೆ ರೀನಾ ತುಳಸಿ, ಒಕ್ಕೂಟ ಮುಖ್ಯಸ್ಥರಾದ ಯಮುನಾ,ಸುಮತಿ ಜೇನು ಸಾಕಾಣಿಕೆ ಫಲಾನುಭವಿಗಳು ಹಾಜರಿದ್ದರು.