ವಿರಾಜಪೇಟೆ:ತಾತ್ಕಾಲಿಕ ಶೆಡ್ ತೆರವು, ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ವಿರಾಜಪೇಟೆ: ಮಿನಿ ವಿಧಾನಸೌದದ ಮುಂದೆ ,ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಚ್.ಆರ್ ಪರಶುರಾಮ್ ನೇತೃತ್ವದಲ್ಲಿ ಆದಿವಾಸಿಗಳಿಂದ ಪ್ರತಿಭಟನೆ ನಡೆಯಿತು.ಇತ್ತೀಚೆಗೆ ವಿರಾಜಪೇಟೆ ಹೊರವಲಯದ ಕೊಳತ್ತೋಡು ಬೈಗೋಡುವಿನಲ್ಲಿ ಪರಿಶಿಷ್ಟ ಪಂಗಡದ ನಿವೇಶನ ರಹಿತ ಕುಟುಂಬದ ಸದಸ್ಯರು ಸರ್ವೆ ನಂಬರ್ 328/1 ರ ಸುಮಾರು 23 ಎಕರೆ70 ಸಂಟ್ ಜಾಗದ ಪೈಸಾರಿ ಸರ್ಕಾರ ಜಾಗವಿದ್ದು ಅದರಲ್ಲಿ 21 ಕುಟುಂಬಗಳು ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. (3-7-25)ರಂದು ಸಂಜೆ 5 ಗಂಟೆಯ ಸಮಯದಲ್ಲಿ ತಾಲ್ಲೂಕಿನ ತಹಶೀಲ್ದಾರರ ತಂಡ ದಿಢೀರ್ ಆಗಮಿಸಿ, ಎಲ್ಲಾ ಕುಟುಂಬದ ಶೆಡ್ ಗಳನ್ನ ತೆರವು ಮಾಡಿದ್ದರು.ಇದನ್ನ ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಅದೇ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ತೋಟದ ಮಾಲೀಕರ ತೋಟಗಳು ಮಾತ್ರ ಆಗೇಯೇ ಬಿಟ್ಟು ಆದಿವಾಸಿಗಳ ಶೆಡ್ ಮಾತ್ರ ಕಿತ್ತು ಹಾಕಿದ ಕ್ರಮ ಸರಿಯಲ್ಲ. ಬಡವರಿಗೆ ಒಂದು ನ್ಯಾಯ ಸಿರಿವಂತರಿಗೆ ಮತ್ತೊಂದು ನ್ಯಾಯ ಎಂದು ದಲಿತ ಸಂಘರ್ಷ ಸಮಿತಿ ಮುಖಂಡರಾದ ಪರಶುರಾಮ ಪ್ರಶ್ನೆ ಮಾಡಿದರು.ಅಲ್ಲದೆ ಅನೇಕ ಆದಿವಾಸಿಗಳ ಜಾಗದಲ್ಲಿ ಅನೇಕ ತೋಟದ ಮಾಲೀಕರು ಕಾಫಿ ತೋಟ ಮಾಡಿಕೊಂಡಿದ್ದಾರೆ.ಅದನ್ನು ಅವರಿಂದ ಬಿಡಿಸಿ ಅಸಲಿ ತೋಟದ ಮಾಲಿಕರಿಗೆ ನೀಡಬೇಕು.ಅಲ್ಲದೆ ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಗ್ರಾಮದ ಸುಮಾರು ಇಪ್ಪತ್ತೈದು ಕುಟುಂಬದ ಸದಸ್ಯರಿಗೆ ಹಕ್ಕು ಪತ್ರ ನೀಡಿದ್ದಾರೆ. ಆದರೆ ಜಾಗವೇ ಇಲ್ಲದೆ ಹಕ್ಕು ಪತ್ರ ನೀಡಿದ್ದಾರೆ ಎಂದು ಪರಶುರಾಮ್ ಹೇಳಿದರು.ನ್ಯಾಯಾಲಯದಲ್ಲಿ ಕೆವಿಟ್ ಅರ್ಜಿ ಸಲ್ಲಿಸಿದರೂ ಕೂಡ ನ್ಯಾಯಾಲಯಕ್ಕೆ ಮನ್ನಣೆ ನೀಡದೇ ಶೆಡ್ ತೆರವು ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.