ವಿರಾಜಪೇಟೆ:ಪ್ರಾಮಾಣಿಕತೆ ಮೆರೆದ ಪತಿ ಹಾಗೂ ಪತ್ನಿ!

ವಿರಾಜಪೇಟೆ:ಪ್ರಾಮಾಣಿಕತೆ ಮೆರೆದ ಪತಿ ಹಾಗೂ ಪತ್ನಿ!
ಮಹಿಳೆಗೆ ಬ್ಯಾಗ್ ಹಿಂತಿರುಗಿಸುತ್ತಿರುವ ಪತ್ರಕರ್ತ ರವಿ: (ಎರಡನೇ ಚಿತ್ರ ಶಿಕ್ಷಕಿ ಪುಷ್ಪ)

ವಿರಾಜಪೇಟೆ:ಗುರುವಾರ ದಿನ ವಿರಾಜಪೇಟೆ ನಗರದ ಕೆ.ಎಸ್.ಆರ್ ಟ.ಸಿ ಬಸ್ ಸ್ಟ್ಯಾಂಡ್ ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಕಳೆದು ಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಹರಿದಾಡುತ್ತಿತ್ತು.ಶಿಕ್ಷಕಿ ಪುಷ್ಪರವರು ದಾರಿಯಲ್ಲಿ ನಡೆದುಕೊಂಡು ಬರುವ ವೇಳೆ ದಾರಿಯಲ್ಲಿ ಕಾಣೆಯಾಗಿದ್ದ ಬ್ಯಾಗ್ ಸಿಕ್ಕಿದ್ದು, ತಕ್ಷಣ ಅವರು ತಮ್ಮ ಪತಿ ವಿರಾಜಪೇಟೆ ನಗರದ ಪತ್ರಕರ್ತರಾದ ರವಿಕುಮಾರ್ ಅವರಿಗೆ ಕರೆಮಾಡಿ ಆ ಬ್ಯಾಗನ್ನು ನೀಡಿದ್ದರು.

ರವಿ ಅವರು ಬ್ಯಾಗ್ ಕಾಣೆಯಾಗಿದ್ದ ಮಹಿಳೆಗೆ ಕರೆ ಮಾಡಿ ವಿಚಾರಿಸಿದಾಗ ಸಮೀನಾ ಕೊಂಡಂಗೇರಿ ಮೂಲದ ಮಹಿಳೆಯ ಬ್ಯಾಗ್ ಎಂದು ಮಾಹಿತಿ ಪಡೆದುಕೊಂಡರು. ಶುಕ್ರವಾರ ದಿನ ಅವರನ್ನು ವಿರಾಜಪೇಟೆಗೆ ಕರೆದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಇರುವ ಬ್ಯಾಗ್ ಅನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.ಪತಿ ಹಾಗೂ ಪತ್ನಿಯ ಪ್ರಾಮಾಣಿಕತೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ‌.