ವಿದ್ಯುತ್ ಆಘಾತಕ್ಕೆ ಯುವಕ ಬಲಿ; ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಡಾ.ಮಂತರ್ ಗೌಡ

ಮಡಿಕೇರಿ: ಶುಕ್ರವಾರ ದಿನ ಮರಗೋಡು ಸಮೀಪದ ಹುಲಿತಾಳ ಗ್ರಾಮದ ಪ್ರದೀಪ್ ಹೆಚ್.ಪಿ (32) ರವರು ವಿದ್ಯುತ್ ಅವಘಡದಲ್ಲಿ ದುರದೃಷ್ಟವಶಾತ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಂದು ಶಾಸಕ ಡಾ.ಮಂತರ್ ಗೌಡ ರವರು ಮಡಿಕೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.ಯುವಕನ ಸಾವಿಗೆ ಶಾಸಕರು ಸಂತಾಪ ವ್ಯಕ್ತಪಡಿಸಿದರು.