ಅರೆಭಾಷೆ ಗೌಡ ಅಕಾಡೆಮಿಯಿಂದ ವಾಲಿಬಾಲ್ ಪಂದ್ಯಾವಳಿ: ಸುರಿವ ಮಳೆಯಲ್ಲೇ ವಾಲಿಬಾಲ್ ವೈಭವ

ಅರೆಭಾಷೆ ಗೌಡ ಅಕಾಡೆಮಿಯಿಂದ ವಾಲಿಬಾಲ್ ಪಂದ್ಯಾವಳಿ:  ಸುರಿವ ಮಳೆಯಲ್ಲೇ ವಾಲಿಬಾಲ್ ವೈಭವ

ಕುಶಾಲನಗರ: ತಾಲ್ಲೂಕಿನ ತೊರೆನೂರು ಗ್ರಾಪಂ ವ್ಯಾಪ್ತಿಯ ಅರಿಶಿನಗುಪ್ಪೆ ಗ್ರಾಮದಲ್ಲಿರುವ ಕೊಡಗು ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ 10 ಕುಟುಂಬ 18 ಗೋತ್ರದ ಗೌಡ ಕುಟುಂಬಗಳ ನಡುವಿನ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಸಿದ್ದಲಿಂಗಪುರದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ನಡೆಯಿತು.

ಬೆಳಗ್ಗೆಯಿಂದ ಸಂಜೆಯವರೆಗೂ ಎಡಬಿಡದೇ ಸುರಿದ ಮಳೆಯಲ್ಲೇ ಕ್ರೀಡಾಪಟುಗಳು ವಾಲಿಬಾಲ್ ಆಡಿದರು. ಸ್ಪೋರಗಟ್ಸ್ ಅಕಾಡೆಮಿಯ ಪ್ರಮುಖರಾದ ಕಳಂಜನ ಉದಯಕುಮಾರ್, ಕೂಡಕಂಡಿ ದರ್ಶನ್, ಕೊರಂಬಡ್ಕ ನಂದಾ, ಪೊನ್ನಚ್ಚನ ಲವೀನ್, ತೊರೆನೂರು ಗ್ರಾಪಂ ಸದಸ್ಯರಾದ ನಿರ್ವಾಣಿ ಪ್ರಕಾಶ್ ಮೊದಲಾದವರಿದ್ದರು.

ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಸಿದ್ದಲಿಂಗಪುರದ ಉದ್ಯಮಿ ನಾಪಂಡ ಮುತ್ತಪ್ಪ, ಕ್ರೀಡೆಗಳು ಪರಸ್ಪರ ಸ್ನೇಹ ಹಾಗೂ ಸೌಹಾರ್ದತೆಯ ಹೆಗ್ಗುರುತಾಗಿವೆ.ಸೋಲು ಗೆಲುವನ್ನು ಕ್ರೀಡಾ ಪಟುಗಳು ಸಮಾನವಾಗಿ ತೆಗೆದುಕೊಳ್ಳಬೇಕೆಂದು ಕರೆಕೊಟ್ಟರು.ಪಂದ್ಯಾವಳಿಯು 8 ತಂಡಗಳ ನಡುವೆ ನಡೆಯಿತು.ಆರಂಭಿಕ ಪಂದ್ಯವು ಕಳಂಜನ ಸುಗು ಪ್ರೆಂಡ್ಸ್ ಹಾಗೂ ಎಸ್ ಎಸ್ ಎಂ ರೈಸಿಂಗ್ ತಂಡಗಳ ನಡುವೆ ಆರಂಭವಾಯಿತು.