ಕಡಂಗ ಯೂನಿಟ್ SKSSF ಅಧ್ಯಕ್ಷ ಇಸ್ಹಾಕ್ ಗೆ ಸನ್ಮಾನ:
ಮಡಿಕೇರಿ: ಕಡಂಗ ಯೂನಿಟ್ ಎಸ್.ಕೆ.ಎಸ್.ಎಸ್.ಎಸ್.ಎಫ್ ಅಧ್ಯಕ್ಷ ಇಸ್ಹಾಕ್ ರವರಿಗೆ ಕಡಂಗ ಎಸ್.ಕೆ.ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ಯೂನಿಟ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.ಕಳೆದ ಎರಡು ತಿಂಗಳಿನಿಂದ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ವಿಶೇಷ ಪ್ರಯತ್ನ ನಡೆಸಿ ಹಾಗೂ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ರೀತಿಯ ಸಂಪನ್ಮೂಲ ಕ್ರೋಢಿಕರಿಸಲು ಮುಂಚೂಣಿಯಲ್ಲಿದ್ದ SKSSF ಕಡಂಗ ಯೂನಿಟ್ ಅಧ್ಯಕ್ಷ ಇಸ್ಹಾಕ್ ರವರನ್ನು ಶನಿವಾರ ಕಡಂಗದಲ್ಲಿ ನಡೆದ ಬಡಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಮತಪ್ರವಚನ ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭ ಕಡಂಗ ಯೂನಿಟ್ ಎಸ್.ಕೆ.ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ಪದಾಧಿಕಾರಿಗಳು ಹಾಜರಿದ್ದರು.