ಕಾಡಾನೆ ದಾಳಿಗೆ ಕಾಂಪೌಂಡ್ ಗೇಟ್ ಜಖಂ

ಸಿದ್ದಾಪುರ:- ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಕಾಣಿಸಿಕೊಳ್ಳುವುದರ ಮೂಲಕ ಕಾರ್ಮಿಕರು, ಬೆಳೆಗಾರರು ,ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಭಯದ ವಾತಾವರಣ ಸೃಷ್ಟಿಸುತ್ತಿರುವ ಕಾಡಾನೆಯೊಂದು ಹಗಲು ರಾತ್ರಿ ವೇಳೆಯಲ್ಲಿ ರಾಜಾರೋಷವಾಗಿ ಗ್ರಾಮ ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದು, ಈ ಕಾಡಾನೆಯಿಂದ ಆತಂಕದಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ಚೆನ್ನಯ್ಯನಕೋಟೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದೆ.ಬೆಳಗಿನ ಜಾವ ಪಟ್ಟಣದ ಮುಖ್ಯ ರಸ್ತೆಗೆ ಬಂದ ಕಾಡಾನೆ ಯೂಸುಫ್ ಹಾಜಿ ಎಂಬಜವರ ಮನೆಯ ಕಾಂಪೌಂಡ್ ಗೇಟ್ ಮೇಲೆ ದಾಳಿ ಮಾಡಿದೆ.
ಆರು ತಿಂಗಳ ಹಿಂದೆ ಓರ್ವ ಮಹಿಳೆಯನ್ನು ಬಲಿ ತೆಗೆದುಕೊಂಡಿದ್ದ ,ಕಾಡಾನೆ ದಿನನಿತ್ಯ ಚೆನ್ನಯ್ಯನಕೋಟೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬಿಡು ಬಿಟ್ಟು ಕೃಷಿ ಫಸಲು ನಾಶ ಮಾಡುವುದರ ಮೂಲಕ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡುತ್ತಿದೆ.ಕಾಡಾನೆ ಹಾವಳಿ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು ಈ ಕಾಡಾನೆಯನ್ನ ಕೂಡಲೆ ಸೆರೆ ಹಿಡಿದು ಸ್ಥಳಂತರ ಮಾಡಬೇಕೆಂದು ಸಮಾಜಿಕ ಕಾರ್ಯಕರ್ತ ಅಬ್ದುಲ್ ರೆಹಮಾನ್ ಒತ್ತಾಯಿಸಿದ್ದಾರೆ.ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭ ರವೀಂದ್ರ ಬಾವೆ,ಉರೈಸ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದರು