ಕಾಡು ಮಕ್ಕಳ ವಿಶೇಷ ಕುಂಡೆ-ಬೇಡು ಹಬ್ಬ;
ಪೊನ್ನಂಪೇಟೆ: ತಾಲ್ಲೂಕಿನ ದೇವರಪುರ ಗ್ರಾಮ ಪಂಚಾಯಿತಿಗೆ ಒಳಪಡುವ ದೇವರಪುರ ಗ್ರಾಮದಲ್ಲಿ ಸ್ಥಳೀಯರು ಅಯ್ಯಪ್ಪ ಮತ್ತು ಭದ್ರಕಾಳಿ ಹೆಸರಿನಲ್ಲಿ ಬೇಡುಹಬ್ಬವನ್ನು ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದು, ದಕ್ಷಿಣ ಕೊಡಗಿನಲ್ಲಿ ಮಾತ್ರ ನಡೆಯುವ ವಿಶಿಷ್ಟ ಆಚರಣೆಯಾದ ಆದಿವಾಸಿ ಸಮುದಾಯದ ಬೇಡು ಹಬ್ಬ ದೇವರಪುರದಲ್ಲಿ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಸಂಭ್ರಮದಿಂದ ನಡೆಯಲಿದೆ. ಅಶ್ಲೀಲ ಪದಗಳಿಂದ ದೇವರನ್ನು ಆರಾಧಿಸುವ ಕಾಡು ಮಕ್ಕಳ ಕುಂಡೆ ಹಬ್ಬದ ಆರಂಭದ ದಿನವಾದ ಬುಧವಾರದಂದು ಪೊನ್ನಂಪೇಟೆ ಮತ್ತು ಗೋಣಿಕೊಪ್ಪಲು ಪಟ್ಟಣದಲ್ಲಿ ಹರಕೆ ಹೊತ್ತ ಚಿತ್ರವಿಚಿತ್ರ ವೇಷಧರಿಸಿದ ಆದಿವಾಸಿಗಳು, ಅಂಗಡಿ, ಮುಂಗಟ್ಟು, ರಸ್ತೆ ಮತ್ತು ಮನೆಗಳಲ್ಲಿ ಕಾಣಿಕೆಯನ್ನು ಸಂಗ್ರಹಿಸಿದರು. ಗುರುವಾರದಂದು ದೇವರಪುರದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಹರಕೆಯನ್ನು ಒಪ್ಪಿಸಿದ ಬಳಿಕ ಬೇಡುಹಬ್ಬ ಸಂಪನ್ನಗೊಳ್ಳಲಿದೆ.
ವರದಿ:ರೋಷನ್ ಚೆಪ್ಪುಡಿರ
What's Your Reaction?






