ಕುಸಿದ ರಸ್ತೆ ಕೂಡಲೇ ಸರಿಪಡಿಸಲು ಎ.ಎಸ್.ಪೊನ್ನಣ್ಣ ಸೂಚನೆ

ಕುಸಿದ ರಸ್ತೆ ಕೂಡಲೇ ಸರಿಪಡಿಸಲು ಎ.ಎಸ್.ಪೊನ್ನಣ್ಣ ಸೂಚನೆ

ಮಡಿಕೇರಿ:ನಿನ್ನೆ ದಿನ ಸುರಿದ ಮಳೆಗೆ ಮಡಿಕೇರಿ ತಾಲೂಕಿನ ಅರ್ವತ್ತೊಕ್ಲು ಗ್ರಾಮದಿಂದ ಕುಂಬಳದಾಳು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅರ್ವತ್ತೋಕ್ಲು ದೇಕಬ್ಬೆ ಬಾಣೆಯ ಸಮೀಪದ ರಸ್ತೆ ಕುಸಿಯಲು ಆರಂಭಗೊಂಡಿದ್ದನ್ನು ಗಮನಿಸಿದ ಸ್ಥಳೀಯ ಮಹಿಳೆ ಕನಕಮಜಲು ತಾರಾ ರವರು ಸಾಮಾಜಿಕ ಜಾಲತಾಣದ ಮೂಲಕ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಗಮನಕ್ಕೆ ತಂದಿದ್ದಾರೆ.ತೆನ್ನಿರ ಮೈನಾ ರವರು ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಎ.ಎಸ್.ಪೊನ್ನಣ್ಣ ನವರು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ತಕ್ಷಣವೇ ದುರಸ್ತಿಪಡಿಸಲು ಸೂಚಿಸಿದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ನೇ ಗುತ್ತಿಗೆದಾರರೊಂದಿಗೆ ದೌಡಾಯಿಸಿದ ಇಂಜಿನಿಯರ್ ಗಳು ಕೂಡಲೇ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ.ಶಾಸಕ ಪೊನ್ನಣ್ಣ ನವರ ಸಕಾಲಿಕ ಸ್ಪಂದನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.