ಕೊಡಗು ಜಿಲ್ಲೆಯಲ್ಲಿ ಆರ್ಭಟಿಸುತ್ತಿರುವ ಆರಿದ್ರಾ ಮಳೆ: ಬಾವಲಿ ಗ್ರಾಮದ ಪಾಂಡಂಡ ಐನ್ ಮನೆಗೆ ಹಾನಿ

ಕೊಡಗು ಜಿಲ್ಲೆಯಲ್ಲಿ ಆರ್ಭಟಿಸುತ್ತಿರುವ ಆರಿದ್ರಾ ಮಳೆ:   ಬಾವಲಿ ಗ್ರಾಮದ ಪಾಂಡಂಡ ಐನ್ ಮನೆಗೆ ಹಾನಿ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ಬಳಿಯ ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಬಾವಲಿ ಗ್ರಾಮದ ಪಾಂಡಂಡ ಕುಟುಂಬಸ್ಥರ ಐನ್ ಮನೆಯು ಸೋಮವಾರ ಸುರಿದ ಬಾರಿ ಗಾಳಿ ಮಳೆಗೆ ಪೂರ್ಣವಾಗಿ ಕುಸಿದು ಬಿದ್ದು ಹಾನಿಯಾಗಿ ನಷ್ಟ ಸಂಭವಿಸಿದೆ. ಐನ್ ಮನೆಯಲ್ಲಿ ಯಾರು ವಾಸವಿಲ್ಲದಿರುವುದರಿಂದ ಬಾರಿ ಅನಾಹುತ ತಪ್ಪಿದಂತ್ತಾಗಿದೆ.ಸ್ಥಳಕ್ಕೆನಾಪೋಕ್ಲು ಕಂದಾಯ ಪರಿವಿಕ್ಷಕ ರವಿಕುಮಾರ್, ಗ್ರಾಮಲೆಕ್ಕಿಗರು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆನಡೆಸಿದ್ದಾರೆ.