ಕೊಡಗು ಜಿಲ್ಲೆಯಲ್ಲಿ ಪೂರ್ವ ಮುಂಗಾರು ಆರ್ಭಟ: 1442 ವಿದ್ಯುತ್ ಕಂಬಗಳಿಗೆ ಹಾನಿ!
ಮಡಿಕೇರಿ:ತೀವ್ರವಾದ ಮಳೆ-ಗಾಳಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1442 ಕಂಬಗಳು, 11 ವಿದ್ಯುತ್ ಪರಿವರ್ತಕಗಳು ಹಾಗೂ 13015 ಕಿ.ಮೀ ವಾಹಕಗಳು ಹಾನಿಗೊಳಗಾಗಿದೆ.
ಈಗಾಗಲೇ 1091 ಕಂಬಗಳು ಹಾಗೂ 09 ಪರಿವರ್ತಕಗಳು ದುರಸ್ಥಿಗೊಳಿಸಿ ಬದಲಾಯಿಸಲಾಗಿದೆ.ದೈನಂದಿನ ಚಟುವಟಿಕೆಗಳಲ್ಲಿ ಸರಾಸರಿ 100 ಕಂಬಗಳು ಬದಲಾವಣೆಯ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.ಮಳೆ-ಗಾಳಿಯ ತೀವ್ರತೆ ಹೆಚ್ಚಾಗಿರುವುದರಿಂದ ವಿದ್ಯುತ್ ಕಂಬಗಳ ಮುರಿಯುವಿಕೆ ಮುಂದುವರಿಯುತ್ತಿದೆ.ವಿದ್ಯುತ್ ಜಾಲದ ದುರಸ್ಥಿ ಕಾರ್ಯವನ್ನು ಚುರುಕುಗೊಳಿಸಲಾಗಿದೆ.ವಿದ್ಯುತ್ ಜಾಲವನ್ನು ಪುನಃ ಸ್ಥಾಪಿಸಲು ಮಡಿಕೇರಿ ವಿಭಾಗದ 231 ಸಿಬ್ಬಂದಿ ಇತರೆ ವಿಭಾಗಗಳಿಂದ 52 ಸಿಬ್ಬಂದಿ ಹಾಗೂ ಹೊರಗುತ್ತಿಗೆಯಿಂದ 75 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಇದರೊಂದಿಗೆ 124 ವಿದ್ಯುತ್ ಗುತ್ತಿಗೆದಾರ ಸಿಬ್ಬಂದಿಗಳು ವಿವಿಧ ಸಲಕರಣೆಗಳೊಂದಿಗೆ ನಿರಂತರವಾಗಿ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಕಾರ್ಯ ಮತ್ತು ಇಲಾಖೆ ವಿಭಾಗ ಮಡಿಕೇರಿ ಇವರು ತಿಳಿಸಿದ್ದಾರೆ.
