ಕೊಡಗು ಮುಸ್ಲಿಂ ಕಪ್ ಫುಟ್ಬಾಲ್: ಎರಡು ಬಾರಿಯ ಚಾಂಪಿಯನ್ ಸಹರಾ ಹೊಳಮಾಳ ತಂಡಕ್ಕೆ ಮೊದಲ ಪಂದ್ಯದಲ್ಲೇ ಆಘಾತ! ಅಂಡರ್ 16 ವಯೋಮಿತಿಯ ಮ್ಯಾಡ್ರಿಡ್ ಎಫ್.ಸಿ ಆಟಗಾರರಿಗೆ ಭರ್ಜರಿ ಗೆಲುವು
ಮಡಿಕೇರಿ: ಕೊಡಗು ಜಿಲ್ಲಾ ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ಫ್ರೆಂಡ್ಸ್ ಅಮ್ಮತ್ತಿ ಸಹಯೋಗದೊಂದಿಗೆ ಅಮ್ಮತ್ತಿಯ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯವಾಳಿಯಲ್ಲಿ ಎರಡು ಬಾರಿ ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಚಾಂಪಿಯನ್ ಪ್ರಶಸ್ತಿ ಪಡೆದಿದ್ದ ಸಹರಾ ಹೊಳಮಾಳ ತಂಡಕ್ಕೆ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲುಂಟಾಗಿದೆ.
ಉದಯೋನ್ಮುಖ ಆಟಗಾರರನ್ನೊಳಗೊಂಡ ಕೇವಲ 16 ವರ್ಷ ವಯೋಮಿತಿಯ ಆಟಗಾರರ ತಂಡ ಮ್ಯಾಡ್ರಿಡ್ ಎಫ್.ಸಿ ಕೊಂಡಂಗೇರಿ ತಂಡವು 3-0 ಗೋಲುಗಳ ಅಂತರದಿಂದ ಸಹರಾ ಹೊಳಮಾಳ ತಂಡವನ್ನು ಸೋಲಿಸಿದೆ.
ಕೊಡಗು ಜಿಲ್ಲಾ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಈ ಬಾರಿ, ಎರಡು ಬಾರಿ ಚಾಂಪಿಯನ್ ಪ್ರಶಸ್ತಿ ಪಡೆದ ತಂಡಗಳಿಗೆ ಮೊದಲ ಪಂದ್ಯದಲ್ಲೇ ಸೋಲು ಕಂಡಿದೆ.
