ಕೊಡಗು ಮುಸ್ಲಿಂ ಕಪ್ ಫುಟ್ಬಾಲ್: ನಾಳೆ ಫೈನಲ್ ಹಣಾಹಣಿ ಯಾರ ಮುಡಿಗೆ ಆರನೇ ವರ್ಷದ ಕೊಡಗು ಮುಸ್ಲಿಂ ಕಪ್ ಫುಟ್ಬಾಲ್

ಕೊಡಗು ಮುಸ್ಲಿಂ ಕಪ್ ಫುಟ್ಬಾಲ್: ನಾಳೆ ಫೈನಲ್ ಹಣಾಹಣಿ  ಯಾರ ಮುಡಿಗೆ ಆರನೇ ವರ್ಷದ ಕೊಡಗು ಮುಸ್ಲಿಂ ಕಪ್ ಫುಟ್ಬಾಲ್

ಮಡಿಕೇರಿ: ಕೊಡಗು ಜಿಲ್ಲಾ ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ಫ್ರೆಂಡ್ಸ್ ಅಮ್ಮತ್ತಿ ಸಹಯೋಗದೊಂದಿಗೆ ಅಮ್ಮತ್ತಿಯ ಜಿ.ಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶನಿವಾರ ಅಮಿಟಿ ಎಫ್.ಸಿ(ಎ) ಗದ್ದೆಹಳ್ಳ,ಕುಂಜಿಲ ಎಫ್.ಸಿ, ಕ್ವಾಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ.

ಅಮಿಟಿ ಎಫ್.ಸಿ ಹಾಗೂ ಹುಂಡಿ ಎಫ್‌.ಸಿ(ಎ) ತಂಡಗಳ ನಡುವಿನ ಫ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ 2-1 ಗೋಲುಗಳ ಅಂತರದಿಂದ ಅಮಿಟಿ ತಂಡವು ಗೆಲುವು ಸಾಧಿಸಿ ಕ್ವಾಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆಯಿತು.

ಶನಿವಾರ ನಡೆದ ದ್ವಿತೀಯ ಫ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಎ.ಎಮ್.ಎಫ್.ಸಿ ತಂಡವನ್ನು 2-1 ಗೋಲುಗಳ ಅಂತರದಿಂದ ಕುಂಜಿಲ ಎಫ್‌ಸಿ ತಂಡವು ಮಣಿಸಿ ಕ್ವಾಟರ್ ಫೈನಲ್ ಪ್ರವೇಶಿಸಿತು .

ಚಾಂಪಿಯನ್ ತಂಡಗಳಿಗೆ ಮೊದಲ ಪಂದ್ಯದಲ್ಲೇ ಸೋಲಿನ ರುಚಿ ತೋರಿಸಿದ ಯುವ ಆಟಗಾರರು:

ಕೊಡಗು ಜಿಲ್ಲಾ ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ಫ್ರೆಂಡ್ಸ್ ಅಮ್ಮತ್ತಿ ಸಹಯೋಗದೊಂದಿಗೆ ಅಮ್ಮತ್ತಿಯ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯವಾಳಿಯಲ್ಲಿ ಎರಡು ಬಾರಿ ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಚಾಂಪಿಯನ್ ಪ್ರಶಸ್ತಿ ಪಡೆದಿದ್ದ ಸಹರಾ ಹೊಳಮಾಳ ತಂಡಕ್ಕೆ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲುಂಟಾಗಿದೆ.ಉದಯೋನ್ಮುಖ ಆಟಗಾರರನ್ನೊಳಗೊಂಡ ಕೇವಲ 16 ವರ್ಷ ವಯೋಮಿತಿಯ ಆಟಗಾರರ ತಂಡ ಮ್ಯಾಡ್ರಿಡ್ ಎಫ್.ಸಿ ಕೊಂಡಂಗೇರಿ ತಂಡವು 3-0 ಗೋಲುಗಳ ಅಂತರದಿಂದ ಸಹರಾ ಹೊಳಮಾಳ ತಂಡವನ್ನು ಸೋಲಿಸಿದೆ.

ಕೊಡಗು ಜಿಲ್ಲಾ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಈ ಬಾರಿ, ಎರಡು ಬಾರಿ ಚಾಂಪಿಯನ್ ಪ್ರಶಸ್ತಿ ಪಡೆದ ತಂಡಗಳಿಗೆ ಮೊದಲ ಪಂದ್ಯದಲ್ಲೇ ಸೋಲು ಕಂಡಿದೆ.ಶುಕ್ರವಾರ ದಿನ, ಎರಡು ಬಾರಿ ಚಾಂಪಿಯನ್ ಪ್ರಶಸ್ತಿ ಪಡೆದಿದ್ದ ಅಲ್ ಅಮೀನ್ ಪಾಲಿಬೆಟ್ಟ ತಂಡವು ಕೂಡ ಮೊದಲೇ ಪಂದ್ಯದಲ್ಲಿ ಸೋಲು ಕಂಡಿತು.