ಕೊಡ್ಲಿಪೇಟೆ: ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾಪನೆ ಮಹೋತ್ಸವ ಸಂಪನ್ನ

ಕೊಡ್ಲಿಪೇಟೆ: ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾಪನೆ ಮಹೋತ್ಸವ ಸಂಪನ್ನ
ಕೊಡ್ಲಿಪೇಟೆ: ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾಪನೆ ಮಹೋತ್ಸವ ಸಂಪನ್ನ

ಕೊಡ್ಲಿಪೇಟೆ : ಸಮೀಪದ ಕಟ್ಟೆಪುರ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಶ್ರೀ ಆಂಜನೇಯ ದೇವರ ಪುನರ್ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ನಡೆಯಿತು.ಅರ್ಚಕರಾದ ಶ್ರೀ ಕುಮಾರ್ ರಾವ್ ಕೆ.ಎಸ್.ಪಟೇಲ್ ರವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿಶೇಷ ಪೂಜಾ ಕ್ಯೆಕಂರ್ಯಗಳು ಜರುಗಿತು.ಶ್ರೀ ಆಂಜನೇಯ ಸ್ವಾಮಿಯ ಕಳಸದ ಪ್ರತಿಷ್ಠಾಪನೆ ಸಮರ್ಪಣೆ ಅಷ್ಟೊತ್ತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.ಸ್ಥಳೀಯ ಕಿರಿಕೊಡ್ಲಿ ಮಠಾದೀಶರಾದ ಶ್ರೀ ಸದಾಶಿವ ಸ್ವಾಮೀಜಿ ದೇವಸ್ಥಾನ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿ ಸುಂದರವಾದ ದೇವಸ್ಥಾನ ನಿರ್ಮಾಣ ಮಾಡಿದ ಗ್ರಾಮಸ್ಥರನ್ನು ಮತ್ತು ಆಡಳಿತ ಸಮಿತಿಯನ್ನು ಅಭಿನಂದಿಸಿದರು.ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿಗಳು ಕಾರ್ಯಕ್ರಮದ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಟಿ‌.ಅಪ್ಪಾಜಿ ರವರು ಕಟ್ಟೆಪುರ ಗ್ರಾಮಸ್ಥರು ಮತ್ತು ಧರ್ಮಸ್ಥಳ ಸಂಘ ಹಾಗೂ ಹೇಮಾವತಿ ನೀರಾವರಿ ಇಲಾಖೆಯ ಸಹಕಾರದೊಂದಿಗೆ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನವನ್ನು ಪುನರ್ ನಿರ್ಮಿಸಿ ಅದ್ಧೂರಿಯಾಗಿ ಕಾರ್ಯಕ್ರಮದ ಮೂಲಕ ಉದ್ಬಾಟನೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕಿ ಲೀಲಾವತಿ ,ಬೆಂಗಳೂರಿನ ಉದ್ಯಮಿ ನಾಗೇಶ್ ,ಗುತ್ತಿಗೆದಾರ ಗಂಗಾದರ್ , ಲೆಕ್ಕ ಪರಿಶೋದಕ ಶ್ರೀಧರ್ ಕುಶಾಲನಗರ, ಇಂಜಿನಿಯರ್ ಪ್ರಸಾದ್ , ಉದ್ಯಮಿ ಪವನ್ ಬೆಸೂರು ಪ್ರಮುಖರಾದ ಪುಟ್ಟರಾಜು ,ಪುರುಷೋತ್ತನ ಭಂಡಾರ ,ಸಂದೇಶ್ ನಾಗರಾಜ್ ,ಊಟದ ದಾನಿಗಳಾದ ವೆಂಕಟೇಶ ಮತ್ತು ತನುಜ ಮುಂತಾದ ದಾನಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಗೋಪಾಲಕೃಷ್ಣ ,ಕಾರ್ಯದರ್ಶಿ ಕೆ.ಟಿ.ಸಿದ್ದಪ್ಪ ,ಖಜಾಂಜಿ ವಸಂತ್‌ಕುಮಾರ್ ,ಸದಸ್ಯರುಗಳಾದ ಹನುಮೇಗೌಡ ಜಗದೀಶ್ ,ಲೊಕೇಶ್ ,ಸಿದ್ದಪ್ಪ ,ದಿವಾಕರ ,ತೋಪೆಗೌಡ ಪರಮೇಶ್ ಜವರಯ್ಯ ,ಸ್ವಾಮಿ ,ಹರೀಶ್ ಗಣೇಶ್ ,ಲೋಲಾಕ್ಷ ಹಾಗೂ ಗ್ರಾಮಸ್ಥರು ಇದ್ದರು.

ಎರಡು ದಿನಗಳು ಕಾಲ‌ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.