ತಿತಿಮತಿ ಗ್ರಾಮ ಪಂಚಾಯಿತಿ ಉಪ ಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಣೇಶ್ ಗೆ ಗೆಲುವು: ಬಿಜೆಪಿ ತೆಕ್ಕೆಯಲ್ಲಿದ್ದ ಸ್ಥಾನ ಕೈ ವಶ!

ತಿತಿಮತಿ ಗ್ರಾಮ ಪಂಚಾಯಿತಿ ಉಪ ಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಣೇಶ್ ಗೆ ಗೆಲುವು:  ಬಿಜೆಪಿ ತೆಕ್ಕೆಯಲ್ಲಿದ್ದ ಸ್ಥಾನ ಕೈ ವಶ!

ಗೋಣಿಕೊಪ್ಪ:ತಿತಿಮತಿ ಗ್ರಾಮ ಪಂಚಾಯಿತಿ ಒಂದು ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಿ.ಕೆ ಗಣೇಶ್ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಶಂಕರ್ ರವರ ವಿರುದ್ಧ 308 ಮತ ಗಳಿಸಿ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಕೇವಲ 113 ಮತ ಬಂದಿದ್ದು, 13 ಮತ ತಿರಸ್ಕೃತಗೊಂಡಿದೆ.     

ವಿರಾಜಪೇಟೆ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಪ್ರತಿನಿಧಿಸುವ ಕ್ಷೇತ್ರದ, ಪ್ರತಿಷ್ಠಿತ ಈ ವಾರ್ಡ್ ಗೆ ನಡೆದ ಚುನಾವಣೆಯಲ್ಲಿ, ಈ ಹಿಂದೆ ಬಿಜೆಪಿ ಗೆಲುವು ಸಾಧಿಸಿತ್ತು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವುದರೊಂದಿಗೆ ಗ್ರಾಮ ಪಂಚಾಯತ್ ನಲ್ಲಿ ತನ್ನ ಸ್ಥಾನವನ್ನು ವೃದ್ಧಿಸಿಕೊಂಡಿದೆ. ಗೆಲುವಿನ ಬಳಿಕ ಮಾತನಾಡಿದ ಪಿಕೆ ಗಣೇಶ ರವರು, ತನ್ನ ಗೆಲುವಿಗಾಗಿ ಶ್ರಮಿಸಿದ ಶಾಸಕರಾದ ಎ ಎಸ್ ಪೊನ್ನಣ್ಣ ರವರಿಗೆ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್ ರವರಿಗೆ , ವಲಯ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಕುಮಾರ್ ರವರಿಗೆ ಮತ್ತು ಪಕ್ಷದ ಪ್ರಮುಖರು, ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.    

ಈ ಸಂದರ್ಭದಲ್ಲಿ ದೇವರಪುರ ವಲಯ ಅಧ್ಯಕ್ಷರಾದ ಭಸಂತ್ ಕುಮಾರ್, ವಿನಯ್, ಸತೀಶ್, ಹಾಗೂ ಪ್ರಕಾಶ್ ಉಪಸ್ಥಿತರಿದ್ದರು.