ನಾಪತ್ತೆಯಾಗಿದ್ದ ಮಾಜಿ ಸೈನಿಕ ಗಿರೀಶ್ ಮೃತದೇಹ ಪತ್ತೆ

ಮಡಿಕೇರಿ:ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಚೆಟ್ಟಳ್ಳಿ ಸಮೀಪದ ಕಂಡಕರೆ ನಿವಾಸಿ ಮಾಜಿ ಸೈನಿಕ ಗಿರೀಶ್ (46) ಮೃತದೇಹ ಪತ್ತೆಯಾಗಿದೆ.3ನೇ ದಿನದ ಕಾರ್ಯಾಚರಣೆ ನಡೆಸಿ ದೇಹ ಪತ್ತೆ ಮಾಡಲಾಗಿದೆ.ನಿಸರ್ಗಧಾಮ ಬಳಿಯ ಕಾವೇರಿ ನದಿಯಲ್ಲಿ ತೇಲಿ ಬಂದಿದ್ದ ಮೃತದೇಹ,ತಕ್ಷಣಮಾಹಿತಿ ಅರಿತು ಕೊಪ್ಪ ಸೇತುವೆ ಕಾವೇರಿ ನದಿಯಲ್ಲಿ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡವು,ಮೃತದೇಹವನ್ನು ಪತ್ತೆ ಹಚ್ಚಲಾಗಿದೆ.ಕುಶಾಲನಗರ ಪೊಲೀಸರು, ಅಗ್ನಿ ಶಾಮಕ ದಳ, ದುಬಾರೆ ಸಿಬ್ಬಂದಿಗಳು ಕಳೆದ ಮೂರು ದಿನಗಳಿಂದ ಕಾರ್ಯಚರಣೆ ನಡೆಸುತ್ತಿದ್ದರು.