ನಾಪೋಕ್ಲು: ಭಾರಿ ಗಾಳಿಮಳೆಗೆ ಮನೆ ತಡೆಗೋಡೆ ಕುಸಿದು ಅಪಾರ ನಷ್ಟ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು: ನಾಪೋಕ್ಲು ವಿನಲ್ಲಿ ಭಾನುವಾರ ಸುರಿದ ಭಾರಿ ಗಾಳಿ ಮಳೆಗೆ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಚೆರಿಯಪರಂಬು ಗ್ರಾಮದ ಪಿ.ಎಂ.ಅರಫಾತ್ ಎಂಬುವವರ ಮನೆಯ ಹಿಂಭಾಗದಲ್ಲಿ ಅಳವಡಿಸಲಾದ ತಡೆಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿದೆ. ತಡೆಗೋಡೆ ಕುಸಿದ ಸಂದರ್ಭ ಲೈನ್ ಮನೆಯ ಒಂದು ಭಾಗವು ಕುಸಿದು ಹೋಗಿದ್ದು ಇದರಿಂದ 15ಲಕ್ಷ ರೂ ಗಳಷ್ಟು ನಷ್ಟ ಸಂಭವಿಸಿದೆ ಎಂದು ಅರಫಾತ್ ಅಳಲು ತೋಡಿಕೊಂಡಿದ್ದಾರೆ.