ನಾಪೋಕ್ಲು: ಮದೀನಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ನಾಪೋಕ್ಲು: ಮದೀನಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ವರದಿ :ಝಕರಿಯ ನಾಪೋಕ್ಲು 

ನಾಪೋಕ್ಲು : ಮುಸಲ್ಮಾನ ಬಾಂಧವರ ತ್ಯಾಗ ಬಲಿದಾನದ ಸಂಕೇತವಾಗಿರುವ ಪವಿತ್ರ ಬಕ್ರೀದ್ ಹಬ್ಬವನ್ನು ನಾಪೋಕ್ಲು ವಿನ ಮದೀನ ಮಸೀದಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಮಸೀದಿಯ ಧರ್ಮಗುರುಗಳಾದ ಶೇಕ್ ಮೌಲಾನ ಇಮ್ತಿಯಾಜ್ ಅವರ ನೇತೃತ್ವದಲ್ಲಿ ಈದ್ ನಮಾಜ್ ನೆರವೇರಿಸಲಾಯಿತು. ಸಮಾಜದಲ್ಲಿ ಎಲ್ಲಾ ಧರ್ಮದವರು ಪರಸ್ಪರ ಪ್ರೀತಿ ವಿಶ್ವಾಸ,ಸಹಬಾಳ್ವೆ ಸೌಹಾರ್ದತೆಯಿಂದ ಜೀವನ ನಡೆಸಬೇಕೆಂದು ಧರ್ಮಗುರುಗಳಾದ ಮೌಲಾನ ಇಮ್ತಿಯಾಜ್ ಅವರು ಈದ್ ಸಂದೇಶ ಸಾರಿದರು.ಬಳಿಕ ನಾಡಿನ ಸುಭೀಕ್ಷಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

 ಈ ಸಂದರ್ಭ ಮಸೀದಿಯ ಅಧ್ಯಕ್ಷರಾದ ವಾಸಿಮ್ ಕ್ಲಾಸಿಕ್,ವಕೀಲಾರದ ರಿಯಾಝ್, ನಝೀರ್ ಹಾಜಿ, ಅಬ್ದುಲ್ ಗಫೂರ್ ಹಾಜಿ, ಜಿಲ್ಲಾ ವಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಝಹೀರ್ ಖಾನ್, ಲಿಯಾಕತ್ ಅಲಿ ಹಾಜಿ, ಅಬ್ದುಲ್ ಜಬ್ಬಾರ್ ಸಾಹೇಬ್ ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು.