ಪೆರುಂಬಾಡಿ:ಶ್ರದ್ಧಾ ಭಕ್ತಿಯಿಂದ ಜರುಗಿದ ಕಂಚಿ ಕಾಮಾಕ್ಷಿ ಕರಗ ಮಹೋತ್ಸವ:
ವಿರಾಜಪೇಟೆ:,ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ಗ್ರಾಮದಲ್ಲಿ ನೆಲೆಗೊಂಡಿರುವ ಆಧಿ ದೇವಿ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ವಾರ್ಷಿಕ ಕರಗ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮೇ 16ರಂದು ಬೆಳಗ್ಗೆ ಸ್ಥಳೀಯ ಪುರೋಹಿತರಿಂದ ಗಣಪತಿ ಹೋಮದೊಂದಿಗೆ ಪೂಜೆ ಆರಂಭವಾಯಿತು. ನಂತರ ಪ್ರತಿಷ್ಠಾನ ಪೂಜೆ ನೆರವೇರಿತು. ಶ್ರೀ ದೇವಿಗೆ ಮಾಹಾಪೂಜೆ ಸಲ್ಲಿಕೆಯಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ 03 ಗಂಟೆಗೆ ಮಡಿಕೇರಿಯ ಕರಗ ಪೂಜಾರಿಯಾದ ಕೃಷ್ಣ ಮತ್ತು ಪೆರುಂಬಾಡಿಯ ಕಿರಣ್ ಅವರುಗಳು ನೇತೃತ್ವದಲ್ಲಿ ಕಂಚಿ ಕಾಮಾಕ್ಷಿ ಮತ್ತು ಮಾರಿಯಮ್ಮ ಕರಗಗಳನ್ನು ಶೃಂಗಾರ ಮಾಡಲಾಯಿತು. ಸ್ಥಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ಜನಾಂಗ ಬಾಂಧವರು ಮತ್ತು ಗ್ರಾಮಸ್ಥರ ಮನೆಗಳಿಗೆ ತೆರಳಿದ ಕರಗಗಳು ಭಕ್ತರಿಂದ ಪೂಜೆಗಳನ್ನು ಪಡೆದುಕೊಂಡಿತು. ಗ್ರಾಮ ನಿವಾಸಿಗಳ ಪೂಜೆ ಸ್ವೀಕರಿಸಿ ಸಂಜೆ 07 ರ ವೇಳೆಗೆ ದೇಗುಲದ ಪ್ರವೇಶವಾಯಿತು. ರಾತ್ರಿ 08 ಗಂಟೆಗೆ ಜನಾಂಗ ಬಾಂಧವರ ಮಹಿಳೆಯರು ತಯಾರಿಸಿದ ತಂಬಿಟ್ಟು ಆರತಿ ದೇವಿಗೆ ಸಲ್ಲಿಸಿದರು. ರಾತ್ರಿ 09 ಗಂಟೆಗೆ ಶ್ರೀ ಮಾರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಮೇ 17 ರಂದು ಬೆಳಿಗ್ಗೆ ಶ್ರೀ ಕಂಚಿ ಕಾಮಾಕ್ಷಿ ದೇವಿಗೆ ವಿಶೇಷ ಅಲಂಕಾರ ಹಾಗೂ ಮಾಹಾಪೂಜೆ ಸಲ್ಲಿಸಲಾಯಿತು. 12 ಗಂಟೆಗೆ ಮಾಹಾಪೂಜೆ ಪ್ರಸಾದ ವಿನಿಯೋಗ ನಡೆಯಿತು. ಭಕ್ತರ ಸಮ್ಮುಖದಲ್ಲಿ ಸಹಾಯಾರ್ಥ ದೇಣಿಗೆ ಲಕ್ಕಿ ಡ್ರಾ ಅಳವಡಿಸಿದ್ದರು. ಕರಗ ವಿಸರ್ಜನೆ ನಡೆದು ವಾರ್ಷಿಕ ಕರಗ ಮಹೋತ್ಸವ ಕ್ಕೆ ವರ್ಣರಂಜಿತ ತೆರೆ ಕಂಡಿತ್ತಯ.
ಶ್ರೀ ಕಂಚಿ ಕಾಮಾಕ್ಷಿ ದೇವಾಲಯ ಆರ್ಜಿ ಪೆರುಂಬಾಡಿ ಆಡಳಿತ ಮಂಡಳಿಯ ಅದ್ಯಕ್ಷರಾದ ಜಿ.ಕೆ. ಬಾಲಕೃಷ್ಣ, ಕಾರ್ಯದರ್ಶಿ ಜಿ.ಡಿ. ಕಿರಣ್ ಕೋಶಾಧಿಕಾರಿ ರಿಜು,ದೇಗುಲ ಸಮಿತಿಯ ಸದಸ್ಯರು, ಜನಾಂಗ ಬಾಂಧವರು,ಕ್ಯಾಲಿಕಟ್, ವಯನಾಡ್, ಕಣ್ಣೂರು, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಕರಗ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಪುನಿತರಾದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ.