ಪೊನ್ನಂಪೇಟೆ: ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 11 ವರ್ಷ: ಯದುವೀರ್ ಒಡೆಯರ್ ಸಂಸದರಾಗಿ 1 ವರ್ಷ: ಬಿಜೆಪಿ ಕಾರ್ಯಕರ್ತರಿಂದ ಹಣ್ಣುಹಂಪಲು ವಿತರಣೆ...

ಪೊನ್ನಂಪೇಟೆ: ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 11 ವರ್ಷ: ಯದುವೀರ್ ಒಡೆಯರ್ ಸಂಸದರಾಗಿ 1 ವರ್ಷ: ಬಿಜೆಪಿ ಕಾರ್ಯಕರ್ತರಿಂದ  ಹಣ್ಣುಹಂಪಲು ವಿತರಣೆ...
ಪೊನ್ನಂಪೇಟೆ: ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 11 ವರ್ಷ: ಯದುವೀರ್ ಒಡೆಯರ್ ಸಂಸದರಾಗಿ 1 ವರ್ಷ: ಬಿಜೆಪಿ ಕಾರ್ಯಕರ್ತರಿಂದ  ಹಣ್ಣುಹಂಪಲು ವಿತರಣೆ...

ವರದಿ :-ಚೆಪ್ಪುಡಿರ ರೋಷನ್, ಪೊನ್ನಂಪೇಟೆ

ಪೊನ್ನಂಪೇಟೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು 11 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆ ಹಾಗೂ ಕೊಡಗು ಮೈಸೂರು ಲೋಕಸಭಾ ಸದಸ್ಯರಾಗಿ ಯದುವೀರ್ ಒಡೆಯರ್ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಾಲೂಕು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದ ಗೋಣಿಕೊಪ್ಪಲಿನ ಸಮುದಾಯ ಅರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಮತ್ತು ಹೊರ ರೋಗಿಗಳಿಗೆ, ಹಾಗೂ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ವೃದ್ದಾಶ್ರಮದ ನಿವಾಸಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

ಈ ಸಂದರ್ಭ ವಿರಾಜಪೇಟೆ ತಾಲೂಕು ಬಿಜೆಪಿ ಮಂಡಲ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ಇಂದಿಗೆ 11 ವರ್ಷ ಪೂರೈಸುತ್ತಿದೆ ಹಾಗೆಯೇ ಯದುವೀರ್ ಒಡೆಯರ್ ಅವರು ಸಂಸದರಾಗಿ ಒಂದು ವರ್ಷ ಪೂರೈಸುತ್ತಿದ್ದು, ಈ ಸಂಭ್ರಮದ ಹಿನ್ನೆಲೆಯಲ್ಲಿ ರೋಗಿಗಳಿಗೆ ಹಾಗೂ ವೃದ್ಧಾಶ್ರಮದ ನಿವಾಸಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತೆಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಅವರು ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರ ಆಡಳಿತಕ್ಕೆ ಬಂದು ಮೂರನೇ ಅವಧಿಯ 11 ನೇ ವರ್ಷಚಾರಣೆ ಮಾಡುತ್ತಿದ್ದೇವೆ ಬಡವರ ಪರವಾಗಿ ಮೋದಿ ಸರಕಾರ ಕೆಲಸ ಮಾಡುತ್ತಿದೆ ಅದೇ ರೀತಿಯಲ್ಲಿ ನಾವು ಬಡವರಿಗೆ ಹಾಗೂ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದ್ದು, ಹಾಗೆಯೇ ಮಡಿಕೇರಿಯ ಅನಾಥ ಅಶ್ರಮದಲ್ಲಿಯೂ ಊಟ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದು, ನಮ್ಮ ಸಂಸದರು ಒಂದು ವರ್ಷದ ಚೊಚ್ಚಲ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ ಅವರು ಮಾತನಾಡಿ, ಕೇಂದ್ರದಲ್ಲಿ ನರೇದ್ರ ಮೋದಿ ಅವರ ಸರಕಾರ ಆಡಳಿತಕ್ಕೆ ಬಂದು 11 ವರ್ಷ ಹಾಗೆಯೇ ಸಂಸದರಾದ ಯದುವೀರ್ ಒಡೆಯರ್ ಅವರು ಒಂದು ವರ್ಷ ತಮ್ಮ ಅಧಿಕಾರವನ್ನು ಯಶಸ್ವಿಯಾಗಿ ಮುನ್ನೆಡಿಸಿಕೊಂಡು ಬಂದಿದ್ದಾರೆoದು ಹರ್ಷ ವ್ಯಕ್ತಪಡಿಸಿದರು.

 ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟೀರ ಕಿಲನ್ ಗಣಪತಿ ಅವರು ಮಾತನಾಡಿ, ಈ ದಿನ 11 ವರ್ಷದ ಆಡಳಿತ ಮಾಡಿರುವ ಮೋದಿ ಸರಕಾರದ ವರ್ಷಚಾರಣೆಯನ್ನು ಬಹಳ ಸಂತಸದಿoದ ಬಿಜೆಪಿ ಗೋಣಿಕೊಪ್ಪ ವಲಯದಿಂದ ಆಚರಿಸಲಾಗುತ್ತಿದ್ದು, ಅಭಿವೃದ್ಧಿ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಇಡೀ ವಿಶ್ವದಲ್ಲೇ ಭಾರತವನ್ನು ನಾಲ್ಕನೇಯ ಸ್ಥಾನಕ್ಕೆ ತರುವಂತ ಕೆಲಸವನ್ನು ಪ್ರಧಾನಿ ಮೋದಿ ಅವರು ಮಾಡಿದ್ದಾರೆ. ಸಂಸದರಾದ ಯದುವೀರ್ ಒಡೆಯರ್ ಅವರು ರಾಜಮನೆತನದಿಂದ ಬಂದಿದ್ದರೂ ಸಹ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಜತೆಗೂಡಿಸಿಕೊಂಡು ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದಾರೆoದರು.

 ಈ ಸಂದರ್ಭ ಜಿಲ್ಲಾ ಬಿಜೆಪಿ ಕೃಷಿ ಮೋರ್ಚಾದ ಉಪಾಧ್ಯಕ್ಷ ಚೋಡುಮಾಡ ದಿನೇಶ್, ಪ್ರದಾನ ಕಾರ್ಯದರ್ಶಿ ಅಲೆಮಾಡ ಸುಧೀರ್, ವಿರಾಜಪೇಟೆ ತಾಲೂಕು ಕಾರ್ಯದರ್ಶಿ ಕೊಟೇರ ಕಿಶನ್, ಪೊನ್ನಂಪೇಟೆ ತಾಲೂಕು ಬಿಜೆಪಿ ಮಂಡಳ ಉಪಾಧ್ಯಕ್ಷ ಮತ್ರಂಡ ಕಬೀರ್ ದಾಸ್, ಪೊನ್ನಂಪೇಟೆ, ಗೋಣಿಕೊಪ್ಪ, ಕಿರುಗೂರು, ಪೊನ್ನಪ್ಪಸಂತೆ, ಕುಟ್ಟ, ಬೆಸಗೂರು, ಗ್ರಾಮಗಳ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.